ವಿಜಯಪುರ

ಮುಳಸಾವಳಗಿ ತಾಂಡಾದಲ್ಲಿ ರಾಮಭಕ್ತ ಹನುಮಾನ್ ಜಾತ್ರೆ

ಮುಳಸಾವಳಗಿ ತಾಂಡಾದಲ್ಲಿ ರಾಮಭಕ್ತ ಹನುಮಾನ್ ಜಾತ್ರೆ


ದೇವರಹಿಪ್ಪರಗಿ, ಸೆ. 3: ತಾಲೂಕಿನ ಮುಳಸಾವಳಗಿ ತಾಂಡಾ ಗ್ರಾಮದಲ್ಲಿನ ಆರಾಧ್ಯ ದೈವ ಶ್ರೀ ರಾಮಭಕ್ತ ಹನುಮಾನ್ ದೇವರ ಜಾತ್ರಾ ಮಹೋತ್ಸವ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು.  

ತಾಲೂಕು ಬಂಜಾರ ಸಮಾಜದ ಉಪಾಧ್ಯಕ್ಷ ಸುರೇಶ ಚವ್ಹಾಣ ಅವರ ನೇತೃತ್ವದಲ್ಲಿ ನಡೆದ ತಾಂಡಾ ಜಾತ್ರೆಯ ಅಂಗವಾಗಿ ಹನುಮಾನ್ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.  

ಗ್ರಾಮದ ಭಕ್ತರೊಂದಿಗೆ ಸುತ್ತಮುತ್ತಲಿನ 24 ತಾಂಡಾ ಗ್ರಾಮಗಳ ಭಕ್ತರು ಸೇರಿದಂತೆ ಸಾವಿರಾರು ಜನರು ಜಾತ್ರೆಯಲ್ಲಿ ಪಾಲ್ಗೊಂಡು ಹನುಮಾನ್ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  

ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ಭಕ್ತರು ಶ್ರದ್ಧಾಭಕ್ತಿಯಿಂದ ಹನುಮಂತನಿಗೆ ಜಯಘೋಷ ಮೊಳಗಿಸಿ, ತಮ್ಮ ಹರಕೆಗಳನ್ನು ಸಲ್ಲಿಸಿದರು.  

ಜಾತ್ರೆಯು ಗ್ರಾಮಸ್ಥರಲ್ಲಿ ಧಾರ್ಮಿಕ ಭಾವನೆ, ಭಕ್ತಿ ಹಾಗೂ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುವಂತಾಯಿತು.  ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ