ಹಾನಗಲ್ ಕುಮಾರೇಶ್ವರರ ಪುಣ್ಯ ಸ್ಮರಣೋತ್ಸವ
ಬಳ್ಳಾರಿ 05: ಯುಗಪುರುಷ ಹಾನಗಲ್ ಕುಮಾರೇಶ್ವರ 91ನೇ ಪುಣ್ಯ ಸ್ಮರಣೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ರವರ ನೇತೃತ್ವದಲ್ಲಿ ಕೊಟ್ಟೂರುಸ್ವಾಮಿ ಮಠದಲ್ಲಿ ಮಾ. 05ರಂದು ನಡೆಯಿತು.
ಹಾನಗಲ್ ಕುಮಾರೇಶ್ವರರು ವೀರಶೈವ ಸಮಾಜದ ಒಳಪಂಗಡಗಳ ಒಗ್ಗಟ್ಟಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ ರಾಜ್ಯದ ಹಲವಾರು ವಿದ್ಯಾಸಂಸ್ಥೆಗಳ ಉದಯಕ್ಕೆ ಶ್ರೀ ಪೂಜ್ಯರು ಕಾರಣರು ಪೂಜ್ಯರ ಸ್ಮರಣೆಯ ಮಾಡುವುದು ನಮ್ಮೆಲ್ಲರ ಆಧ್ಯಾ ಕರ್ತವ್ಯ.
ಈ ಸಂದರ್ಭದಲ್ಲಿ ಕೊಟ್ಟೂರು ಮಠದ ಕಾರ್ಯದರ್ಶಿ ಬಸವರಾಜಸ್ವಾಮಿ, ಸಮಾಜದ ಹಿರಿಯ ಮುಖಂಡ ತುಂಗಭದ್ರ ರೈತ ಸಂಘದ ದರೂರು ಪುರುಷೋತ್ತಮಗೌಡ್ರು, ಹಿರಿಯ ಮುಖಂಡ ಕೇಣಿ ಬಸಪ್ಪರವರು, ಕೋರಿ ವಿರುಪಾಕ್ಷಪ್ಪ ನವರು, ಕುರುಗೋಡು ನಾಡಗೌಡರ ಜಯಣ್ಣರವರು, ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿಯ 10 ಜನ ಮಹಿಳಾ ಸದಸ್ಯರು, 20 ಪುರುಷ ಸದಸ್ಯರುಗಳು ಉಪಸ್ಥಿತರಿದ್ದರು, ಡಿ.ಕಗ್ಗಲ್ ಶಂಕರ್, ವನ್ನನಗೌಡ, ಅರುಣ್ಕುಮಾರ್, ಚಾನಾಳ್ ಮಲ್ಲಿಕಾರ್ಜುನ, ಬಿ.ವಿರೇಶ್, ಮಹಾಂತೇಶ್, ತಿಪ್ಪಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.