ತಿರಂಗದ ಬೆಳಕಿನಲ್ಲಿ ಮಿಂದೆದ್ದ ಹಂಪಿ
ಬಳ್ಳಾರಿ: ಆಗಸ್ಟ್ 10 : ಸ್ವಾತಂತ್ರ್ಯೋತ್ಸವದ 75 ವರ್ಷಗಳ ಸಂದರ್ಭದಲ್ಲಿ ಬಿಜೆಪಿ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆ ವಿಶ್ವವಿಖ್ಯಾತ ಐತಿಹಾಸಿಕ ಸ್ಥಳ ಹಂಪಿ ತಿರಂಗಾ ಬಣ್ಣಗಳಿಂದ ಕಂಗೊಳಿಸುತ್ತಿದೆ.
ಹಂಪಿ ತಿರಂಗಾ ಬಣ್ಣಗಳಿಂದ ಕಂಗೊಳಿಸುತ್ತಿರುವುದನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂ ಮಾಡಿದ್ದು, ನಮ್ಮ ಐತಿಹಾಸಿಕ ನಗರವಾದ ಹಂಪಿಯ ಸ್ಮಾರಕಗಳು ನಮ್ಮ ತ್ರಿವರ್ಣ ಬಣ್ಣಗಳಿಂದ ಬೆಳಗುತ್ತಿವೆ. ಒಂದು ಸುಂದರ ಮತ್ತು ಸ್ಪೂರ್ತಿದಾಯಕ ದೃಶ್ಯ ಎಂದು ಹೇಳಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮನೆಗಳನ್ನು ಬಾವುಟ ಹಾರಿಸಲು ಸಜ್ಜಾಗಿದ್ದು, ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.