ನೇಮಿರಾಜ್ ನಾಯ್ಕ್‌ಗೆ ಒಲಿದ ಹಗರಿಬೊಮ್ಮನಹಳ್ಳಿ ಕ್ಷೇತ್ರ

ಲೋಕದರ್ಶನ ವರದಿ 

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಮೇ.14 : ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿನ ಮತದಾರು 2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್‌ ಅವರಿಗೆ ಆಶೀರ್ವದಿಸಿ  84023 ಮತಗಳನ್ನು ನೀಡಿ 11344 ಮತಗಳ ಅಂತರದಿಂದ ನೇಮಿರಾಜ್ ನಾಯ್ಕ್‌ ಗೆಲುವು ಸಾಧಿಸಿದ್ದಾರೆ. 

ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಲ್ ಬಿ ಪಿ ಭೀಮಾನಾಯ್ಕ್‌ ಅವರು 72679 ಮತಗಳನ್ನು ಪಡೆದು ಎರಡನೆ ಸ್ಥಾನ ಪಡೆದಿದ್ದರೆ, ಬಿಜೆಪಿಯ ಬಲ್ಲಹುಣ್ಸಿ ರಾಮಣ್ಣ 27026 ಮತಗಳನ್ನು ಪಡೆದಿದ್ದಾರೆ. 

 ಕ್ಷೇತ್ರದೆಲ್ಲೆಡೆ ಸ್ವಾಭಿಮಾನಿ ನೇಮರಾಜ್ ನಾಯ್ಕ್‌ ಹೆಸರು ಹೆಚ್ಚು ಜಪ ಮಾಡುತ್ತಿದ್ದು ಬಿಜೆಪಿ ಟಿಕೆಟ್ ವಂಚಿತರಾಗಿದ್ದ ನೇಮರಾಜ್ ನಾಯ್ಕ್‌ ಅವರು ತಮ್ಮ ಕಾರ್ಯಕರ್ತರೊಡನೆ ಸಭೆ ನಡೆಸಿ ಜೆಡಿಎಸ್‌ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದು ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ಜೆಡಿಎಸ್‌ಗೆ ಒಲವು ತೋರಿಸಿದ್ದಾರೆ. ಮಾಜಿ ಶಾಸಕ ಭೀಮಾನಾಯ್ಕ್‌ ಅಭಿವೃಧ್ಧಿ ಕಾರ್ಯಗಳು ಕೈ ಹಿಡಿಯುತ್ತವೆ ಎಂಬ ಅತೀ ಹೆಚ್ಚಿನ ವಿಶ್ವಾಸಕ್ಕೆ ಮತದಾರ ಕೊಳ್ಳಿ ಇಟ್ಟಿರುವುದಂತೂ ಸತ್ಯ. ಇದರಿಂದ ಕಾಂಗ್ರೆಸ್ ಎರಡನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. 

ನೇಮಿರಾಜ್ ನಾಯ್ಕ್‌ ಅಭಿಮಾನಿಗಳು ಮತ ಎಣಿಕೆಯ ದಿನವಾದ ಶನಿವಾರದಂದು ಗೆಲುವಿಗಾಗಿ ಕ್ಷೇತ್ರದ ವಿವಿಧೆಡೆ ಬೆಳೆಗ್ಗೆ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ  ವಿಶೇಷ ಪೂಜೆ ಸಲ್ಲಿಸಿದರು. ಸಿಹಿ ಹಂಚಿ ಕ್ಷೇತ್ರದೆಲ್ಲೆಡೆ ಗೆಲುವನ್ನು ಸಂಭ್ರಮಿಸಿದರು.