ಹಗರಿಬೊಮ್ಮನಹಳ್ಳಿ ವಿಧಾನ ಸಭೆ ಚುನಾವಣೆ ಸಕಲ ಸಿಧ್ಧತೆ ; ಕ್ಷೇತ್ರದಲ್ಲಿ 252 ಮತಗಟ್ಟೆ, ಒಟ್ಟು 2,25,395 ಮತದಾರರು ಸಿ ವಿಜಿಲ್ ಆ್ಯಪ್ ಬಳಸಿ ಅಕ್ರಮಗಳಿಗೆ ಬ್ರೇಕ್ ಹಾಕಲು ಸಾರ್ವಜನಿಕರು ಮುಂದಾಗಿ : ತೇಜಾ ರೆಡ್ಡಿ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ. 13 : ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಾಧ್ಯಾಂತ ಈ ಬಾರಿಯ ಚುನಾವಣೆಯು ಪರಾದರ್ಶಕವಾಗಿ ನ್ಯಾಯಸಮ್ಮತವಾಗಿ ನೆಡೆಯಲು ಸಿದ್ದತೆ ನೆಡೆಸಿದ್ದು ಒಟ್ಟು 252 ಮತಗಟ್ಟೆಗಳು ಕಾರ್ಯ ನಿರ್ವಹಿಸುತ್ತಿದ್ದು, 2.25,395 ಮತದಾರರು ಕ್ಷೇತ್ರದಲ್ಲಿ ಮತದಾನ ಹಕ್ಕು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ತೇಜಾ ಆನಂದ ರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಹಳೇ ತಹಶಿಲ್ದಾರ್ ಕಛೇರಿಯಲ್ಲಿ ಚುನಾವಣಾ ನಿಮಿತ್ತ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಏಪ್ರೀಲ್ 13 ರಿಂದ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ ಹಾಗೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾವಾಗಿ ಏಪ್ರೀಲ್ 20 ಕ್ಕೆ ನಿಗದಿಯಾಗಿದೆ. 21 ರಂದು ಪರೀಶೀಲನೆ 24ಕ್ಕೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು ರಜೆ ದಿನ ಹೊರತುಪಡಿಸಿ ಉಳಿದ ನಿಗದಿತ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ರವರೆಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತವೆ.
80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮನೆಯಲ್ಲಿಯೇ ಸೀಕ್ರೇಟ್ ಬೂತ್ ನಿರ್ಮಿಸಿ ಮತ ಹಾಕಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಮುಂದಾಗಿದೆ ಇದೇ ರೀತಿ 12 ಇಲಾಖೆ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ನೌಕರರಿಗೆ ಪೋಸ್ಟಲ್ ಬ್ಯಾಲೇಡ್ ಮುಖಾಂತರ ಮತ ಚಲಾಯಿಸುವ ಅನೂಕೂಲ ಕಲ್ಪಿಸಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕ್ರಿಮಿನಲ್ ಮೊದ್ದಮೆಗಳು ಹೊಂದಿದಲ್ಲಿ ಟಿಕೇಟ್ ನೀಡಿದ ಪಕ್ಷ ಹಾಗೂ ಅಭ್ಯರ್ಥಿ ಆದಕ್ಕೆ ಸಂಭಂಧಿಸಿದಂತೆ ಪತ್ರಿಕಾ ಪ್ರಕಟಣೆ ಕಡ್ಡಾಯವಾಗಿ ನೀಡಬೇಕು , ಮಂದಿರ, ಮಸ್ಜಿದ್, ಚರ್ಚ್ ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ಪ್ರಚಾರ ಮಾಡುವಂತಿಲ್ಲ. ಮರಿಯಮ್ಮನಹಳ್ಳಿ, ಗರಗನಾಗಲಾಪುರ, ದಶಮಾಪುರ ಹಾಗೂ ಹಾರಾಳು ಗಳಲ್ಲಿ ಚೆಕ್ಪೋಸ್ಟ್ ನೀಯೋಜಿಸಲಾಗಿದ್ದು 2 ಲಕ್ಷ ಮೌಲ್ಯದ ಮದ್ಯ ಹಾಗೂ ದಾಖಲೆ ಇಲ್ಲದ 3.80 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಸಿ.ವೀಜೀಲ್ ಆ್ಯಪ್ನಿಂದ ಅಕ್ರಮ ತಡೆ : ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನೀಡುವ ಆಮಿಷಗಳ ಮೇಲೆ ಕಣ್ಣಿಡಲು ಇ ಆ್ಯಪ್ ಸಹಾಕರಿಯಾಗಿದೆ, ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಂಡು ಅಕ್ರಮಗಳಿಗೆ ಬ್ರೇಕ್ ಹಾಕುವಲ್ಲಿ ಅಧಿಕಾರಿಗಳಿಗೆ ನೆರವಾಗುವಂತೆ ಮನವಿ ಮಾಡಿದರು. ವೋಟರ್ಸ ಹೆಲ್ಪಲೈನ್ ಆ್ಯಪ್ನಲ್ಲಿ ಮತದಾರರಿಗೆ ಸಹಾಯವಾಗುವ ವಿಷಯಗಳು ದೊರೆಯುತ್ತವೆ, ಸುವಿಧ ಆ್ಯಪ್ ನಲ್ಲಿ ಅಭ್ಯರ್ಥಿಗಳು ಪಡೆಯಬೇಕಿರುವ ಪರವಾನಿಗೆಗಳಿಗೆ ಸಂಭಧಿಸಿದ್ದಾಗಿವೆ. ಕ್ಷೇತ್ರದಲ್ಲಿ 85 ಸೂಕ್ಷ್ಮ ಮತಗಟ್ಟೆ ಕೇಂದ್ರಗಳನ್ನು ಗುರುತಿಸಿದ್ದು ಸಿಸಿ ಕ್ಯಾಮರಾ ಅಳವಡಿಸಲಾಗುವುದು.
ಮೂಲಭೂತ ಸೌಕರ್ಯಗಳು : ಪ್ರತಿಯೊಂದು ಬೂತ್ನಲ್ಲಿ ಮತದಾನ ಮಾಡುವ ಮತದಾರರಿಗೆ ಕುಡಿಯುವ ನೀರು, ಮತಗಟ್ಟಿಗಳಲ್ಲಿ ಬೆಳಕು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ್ ಶಂಭಣ್ಣ ಗಾಳಿ,ಎಂಸಿಸಿ ನೂಡೆಲ್ ಅಧಿಕಾರಿ ಪರಮೇಶ್ವರ ಜಿ, ಪಿ.ಬಿ ನೂಡೆಲ್ ಅಧಿಕಾರಿ ಕಿರಣಕುಮಾರ್,ಇವಿಎಂ ನೂಡೆಲ್ ಅಧಿಕಾರಿ ಶಶಿಕುಮಾರ್ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಆಂಜನೇಯ ಪುರಸಭೆ ಅಧಿಕಾರಿ ಮಾರಣ್ಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.