ನಕಲಿ ಇ-ಮೇಲ್ ಪ್ರಕರಣ; ಹೃತಿಕ್ ರೋಷನ್ ಹೇಳಿಕೆ
ಮುಂಬೈ, ಫೆ 27: ನಕಲಿ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಾಯಕ ನಟ ಹೃತಿಕ್ ರೋಷನ್ ಶನಿವಾರ ಮುಂಬೈ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಹಾಜರಾಗಿದ್ದರು. 2016ರ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಕ್ರೈಂ ಬ್ರಾಂಚ್ ಪೊಲೀಸರಿಗೆ ಹೇಳಿಕೆ ನೀಡಿದರು. ನಟಿ ಕಂಗನಾ ರಣಾವತ್ ಗೆ ನಕಲಿ ಐಡಿ ಮೂಲಕ ಇ- ಮೇಲ್ ಕಳುಹಿಸಿದ ಆರೋಪ ಹೃತಿಕ್ ರೋಷನ್ ಅವರ ಮೇಲಿದೆ. ಆ ವರ್ಷ ಕಂಗಾನಾ, ಹೃತಿಕ್ ರೋಷನ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಜಗಳ ನಡೆದಿತ್ತು. ಒಂದು ಹಂತದಲ್ಲಿ ಕಂಗನಾ ರಣಾವತ್ ಬಗ್ಗೆ ಹೃತಿಕ್ ರೋಷನ್ ಅನುಚಿತ ಕಾಮೆಂಟ್ ಮಾಡಿದ್ದರು. ಕಂಗನಾ ಜೊತೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲ, ಆಕೆ ಕೂಡ ತಮಗೆ ನೂರಾರು ಇ-ಮೇಲ್ ಸಹ ಕಳುಹಿಸಿದ್ದಳು ಎಂದು ಹೃತಿಕ್ ತಿಳಿಸಿದ್ದಾರೆ. ಆದರೆ, ತಮ್ಮ ಹೆಸರಿನಲ್ಲಿ ಕಂಗನಾಕ್ಕೆ ಯಾರೋ ಮೇಲ್ ಕಳುಹಿಸಿದ್ದಾರೆ ಎಂದು ಹೃತಿಕ್ ದೂರಿದ್ದಾರೆ.2013 ರಿಂದ 2014 ರ ನಡುವೆ ಈ -ಮೇಲ್ ಗಳು ರವಾನೆಯಾಗಿವೆ ಎಂದು ಅವರು ಹೇಳಿದ್ದಾರೆ. ಹೃತಿಕ್ ನೀಡಿದ್ದ ದೂರಿನ ಅನ್ವಯ ಸೈಬರ್ ಸೆಲ್ 2016ರಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡಿತ್ತು, ಹೃತಿಕ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್ ವಶಪಡಿಸಿಕೊಂಡಿತ್ತು.