ಎಚ್ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ನಿಮಿತ್ಯ ರಕ್ತದಾನ ಶಿಬಿರ
ರಾಣೆಬೆನ್ನೂರು 17: ಹಲಗೇರಿ ರಸ್ತೆಯ ಜೆಡಿಎಸ್ ಪಕ್ಷದ ಸಂಪರ್ಕ ಕಾಯರ್ಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ನಿಮಿತ್ತ, ಮಂಜುನಾಥಗೌಡ ಶಿವಣ್ಣನವರ್ ಅವರ ಅಭಿಮಾನಿ ಬಳಗವು, ಸಾರ್ವಜನಿಕವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಯೋಜಿಸಿತ್ತು. ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಹೊನ್ನಜ್ಜೇರ್ ಅವರು ಸೇರಿದಂತೆ, ನಗರದ ಮತ್ತು ತಾಲೂಕಿನ ಅನೇಕ ಯುವಕರು ಸ್ವಯಂ ರಕ್ತದಾನ ಮಾಡುವುದರ ಮೂಲಕ, ತಮ್ಮ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಣೆಬೆನ್ನೂರು ಬ್ಲಡ್ ಬ್ಯಾಂಕ್ ಸಂಯೋಜಕ ಡಾ :ಸಂತೋಷ್ ನಲ್ಲಿಕೊಪ್ಪ ಅವರು, ರಕ್ತ ಕೃತಕವಾಗಿ ತಯಾರಿಸುವ ವಸ್ತುವಲ್ಲ, ನೈಸರ್ಗಿಕವಾಗಿ ಉತ್ಪತ್ತಿಯಾಗುವ ಬಹು ಅಮೂಲ್ಯವಾದ ವಸ್ತು ಇದಾಗಿದೆ. ಅಪಘಾತಗಳ ಸಂಭವಿಸಿದಾಗ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ ಆ ಸಂದರ್ಭದಲ್ಲಿ ತಕ್ಷಣವೇ ಖರೀದಿ ಮಾಡಿ ತರುವ ವಸ್ತು ಇದಾಗದೆ ಇದ್ದಿದ್ದರಿಂದ ಯುವ ಸಮುದಾಯ, ಮತ್ತೊಬ್ಬರ ಪ್ರಾಣ ರಕ್ಷಣೆ ಮಾಡಲು ತಮ್ಮ ರಕ್ತವನ್ನು ದಾನ ನೀಡುವವರ ಮೂಲಕ ತಮ್ಮ ಮಾನವೀಯತೆ ಮೆರೆಯಬೇಕಾದ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡರಾದ ಸಂದೀಪ್ ಬಂಕಾಪುರ್, ಮಲ್ಲಿಕಾರ್ಜುನ ತಗ್ಗಿನ, ಮಂಜುನಾಥ ಗಡ್ಡದಗೋಳಿ, ನಾಗರಾಜ ಪಾಟೀಲ್, ಶಿವು ಕಡೂರು, ಜಯರಾಮ್ ಅಗಡಿ, ಇಫರ್ಾನ್ ದುದನಿ, ಮಂಜುನಾಥ ಚಳಗೇರಿ, ರಾಕೇಶ್ ಜಾದವ್, ಎಸ್ ಆರ್ ಗಡ್ಡದಗೂಳಿ, ತಮ್ಮಣ್ಣ ಮುದುಕಣ್ಣನವರ್, ಹನುಮಂತಪ್ಪ ಹುಗ್ಗಿ, ಅಶೋಕ್ ಲಿಂಗದಹಳ್ಳಿ, ಸಿದ್ದಪ್ಪ ಗುಡಿ ಮುಂದ್ಲರ, ಮತ್ತು ಬ್ಲಡ್ ಬ್ಯಾಂಕಿನ ಸುಮಿತ್ರ, ಮಾರುತಿ, ವೀಣಾ ಅಭಿಮಾನಿ ಬಳಗದ ನೂರಾರು ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು.