ರಾಷ್ಟ್ರೀಯ

ಜನವರಿವರೆಗೆ ರಿಪಬ್ಲಿಕ್‌ ಟಿವಿ ವಿರುದ್ಧ ಯಾವುದೇ ಕ್ರಮವಿಲ್ಲ; ಹೈಕೋರ್ಟ್‌ಗೆ ಪೊಲೀಸರ ಹೇಳಿಕೆ

ಜನವರಿವರೆಗೆ ರಿಪಬ್ಲಿಕ್‌ ಟಿವಿ ವಿರುದ್ಧ ಯಾವುದೇ ಕ್ರಮವಿಲ್ಲ; ಹೈಕೋರ್ಟ್‌ಗೆ ಪೊಲೀಸರ ಹೇಳಿಕೆ

ಮುಂಬೈ, ಡಿ 17 :  ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂದಿನ ವರ್ಷದ ಜನವರಿ ಮೊದಲ ವಾರದವರೆಗೆ ರಿಪಬ್ಲಿಕ್‌ ಟಿವಿ ವಾಹಿನಿ ಮತ್ತು ಅದನ್ನು ನಡೆಸುವ ಎಆರ್‌ಜಿ ಸಮೂಹದ ಸಿಬ್ಬಂದಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು  ಅವಕಾಶ ಕೋರಿ ಅರ್ನಾಬ್ ಗೋಸ್ವಾಮಿ ಮತ್ತು ಸಂಸ್ಥೆಯ ಇತರ ನೌಕರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಭಾಜಿ ಶಿಂಧೆ ಮತ್ತು ಮಕರಂದ್ ಕಾರ್ನಿಕ್ ಅವರ ವಿಭಾಗೀಯ ಪೀಠ, ವಾಸ್ತುಶಿಲ್ಪಿ ಅನ್ವಯ್ ಸಿಂಗ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆತನ ವಿರುದ್ಧ ದಾಖಲಾದ ಚಾರ್ಜ್‌ಶೀಟ್‌ ಪ್ರಶ್ನಿಸಿ ಅನುಮತಿ ನೀಡಿತು.ಅರ್ನಬ್‌ ಗೋಸ್ವಾಮಿ ಅವರನ್ನು ಬಂಧಿಸಿದ ಎರಡು ದಿನಗಳ ನಂತರ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು.


ಸುದ್ದಿ ಓದಿ