ಬಳ್ಳಾರಿ

ಹೆಚ್.ಎಲ್.ಸಿ ಕಾಲುವೆಗೆ ಡಿ. 20 ರಿಂದ 30ರವರೆಗೆ ನೀರು: ಪುರುಷೋತ್ತಮಗೌಡ

ಹೆಚ್.ಎಲ್.ಸಿ ಕಾಲುವೆಗೆ ಡಿ. 20 ರಿಂದ 30ರವರೆಗೆ ನೀರು: ಪುರುಷೋತ್ತಮಗೌಡ

ಲೋಕದರ್ಶನ ವರದಿ

ಬಳ್ಳಾರಿ 09: ಬೆಳೆದು ನಿಂತಿರುವ ಮೆಣಸಿನಕಾಯಿ, ಹತ್ತಿ ಬೆಳೆಯನ್ನು ರಕ್ಷಿಸಿಕೊಳ್ಳಲು ತುಂಗಭದ್ರ ಬಲದಂಡೆ ಮೆಲ್ಪಟ್ಟ (ಹೆಚ್.ಎಲ್.ಸಿ) ಕಾಲುವೆಗೆ ಡಿ. 20ರಿಂದ 10 ದಿನಗಳ ಕಾಲ ನೀರು ಹರಿಸಲು ಸಂಸದ ಉಗ್ರಪ್ಪ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್. ಪರಿಷತ್ ಸದಸ್ಯೆರಾದ ಕೆಸಿ ಕೊಂಡಯ್ಯ ಅವರು ತಿಳಿಸಿದ್ದು. 

ಈ ತಿಂಗಳ 15ರಿಂದಲೇ ನೀರು ಬಿಡಬೇಕೆಂದು ತುಂಗಭದ್ರ ರೈತಸಂಘದ ಅಧ್ಯಕ್ಷರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದಾರೆ. ಅವರು ಈ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಂದು ತುಂಗಭದ್ರ ಮಂಡಳಿ ಅಧಿಕಾರಿಗಳು ಮೌಖಿಕವಾಗಿ ಡಿ.30ರವರೆಗೆ ನೀರು ಬಿಡಲು ನಿರ್ಧರಿಸಿತ್ತು. ಆದರೆ ಈಗ ನೀರು ಬಂದ್ ಮಾಡಿದೆ. ಕೆ.ಸಿ ಕಾಲುವೆ ಮೂಲಕ ಡಿ. 20ರಿಂದ ತೆಗೆದುಕೊಳ್ಳಲು ಆಂಧ್ರ ಪ್ರದೇಶ ಮುಂದಾಗಿದೆ. ಇದರೊಂದಿಗೆ ಕನರ್ಾಟಕದ ನೀರನ್ನು ಹರಿಸಬೇಕೆಂದು ತುಂಗಭದ್ರ ಮಂಡಳಿ ಈಗ ಆಂಧ್ರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ನೇರವಾಗಿ ಆರೋಪಸಿದರು. ಅವರು ಮಂಡಳಿ ಕನರ್ಾಟಕದ ಜಪ್ರತಿನಿಧಿಗಳ ಮಾತಿಗೂ ಬೆಲೆ ನೀಡುತ್ತಿಲ್ಲ. ತಮ್ಮದೇ ನಿಧರ್ಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು. ತುಂಗಭದ್ರ ಮಂಡಳಿಯಲ್ಲಿನ ಕಾನರ್ಾಟಕದ ಮುಖ್ಯ ಇಂಜಿನೀಯರ್ ಮಂಜಪ್ಪಗೆ ನೀರಿನ ಬಗ್ಗೆ ಅನುಭವ ಇಲ್ಲ. ಬರೀ ಸುಳ್ಳು ಹೇಳುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. 

ಅದಕ್ಕಾಗಿ ಅವರನ್ನು ಬೇರೆ ಕಡೆ ವಗರ್ಾಹಿಸಬೇಕೆಂದು ಆಗ್ರಹಿಸಿದರು. ಎಲ್.ಎಲ್.ಸಿ ಕಾಲುವೆ ಕನರ್ಾಟಕ ಮತ್ತು ಆಂಧ್ರ ಪಾಲಿನ ನೀರನ್ನು ತ ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ.26ರಿಂದ ಮಾಚರ್್ 31ರವೆರೆಗೆ ನೀರು ಹರಿಸಲು ನೀರಾವರಿ ಸಲಾಹ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಈಗ ಆಂಧ್ರ ಪ್ರದೇಶದ ಕನರ್ೂಲು ಅಧಿಕಾರಿಗಳು ಕೇವಲ ಜನವರಿ 10ರವರೆಗೆ ಮಾತ್ರ ಸಾಕು ಎಂದು ಹೇಳುತ್ತಿದ್ದಾರೆ. ಈ ರೀತಿ ಆದರೆ ಕನರ್ಾಟಕದ ಮೂರು ಜಿಲ್ಲೆಯ ರೈತರಿಗೆ ತೊಂದರೆಯಾಗಲಿದೆ. ಅದಕ್ಕಾಗಿ ಸಮಿತಿಯ ಸಭೆ ನಿರ್ಧರಿಸಿದಂತೆ ನಡೆದುಕೊಳ್ಳಬೇಕು. ಈ ಬಗ್ಗೆ ಇನ್ನು ಒಂದುವಾರದಲ್ಲಿ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು. ಇಲ್ಲದಿದ್ದರೇ ಎಲ್.ಎಲ್.ಸಿ ಕಾಲುವೆಯ ಡಿಸ್ಟಿಬ್ಯೂಟರ್ಗಳನ್ನು ದ್ವಂಸಗೊಳಿಸಿ ಕಾಲುವೆ ಹೊಡೆದು ಸಾವಿರಾರು ಜನ ರೈತರು ದಂಗೆ ಹೇಳಲಿದ್ದಾರೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭೀಮನಗೌಡ, ರಾಮನಗೌಡ, ಮುದ್ದನಗೌಡ, ಶಿವಯ್ಯ, ಗಂಗಾವತಿ ವಿರೇಶ್, ವೀರನಗೌಡ ಸೇರಿದಂತೆ ನೂರಾರು ಜನ ರೈತರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ