ಬಳ್ಳಾರಿ

ದಿ.ಹೆಚ್‌. ಲಿಂಗರೆಡ್ಡಿ ಪುಣ್ಯ ಸ್ಮರಣೆ

ದಿ.ಹೆಚ್‌. ಲಿಂಗರೆಡ್ಡಿ  ಪುಣ್ಯ ಸ್ಮರಣೆ

ಲೋಕದರ್ಶನ ವರದಿ 

ಬಳ್ಳಾರಿ 25: ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ ವತಿಯಿಂದ 24ರಂದು ಸಂಜೆ 6-30ಕ್ಕೆ ದಿವಂಗತ ಹೆಚ್‌. ಲಿಂಗರೆಡ್ಡಿ  46ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಕೆ. ಕೊಟೆಶ್ವರ ರಾವ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಉಪಾಧ್ಯಕ್ಷ ಕೆ ರಾಮಂಜನೇಯಲು, ಎನ್ ಬಸವರಾಜ್, ಖಜಾಂಚಿ ಶ್ರೀಪಿ ಧನಂಜಯ, ಚೆಲ್ಲಾ ಅಮರೆಂದ್ರ ನಾಥ ಚೌದರಿ, ಗಾದೆಂ ಗೋಪಾಲ ಕ್ರಷ್ಣ, ಎನ್ ಪ್ರಕಾಶ್, ಜಿ ​‍್ರಭಾಕರಿ್್ಬ ಎಂ ಬಸವರಾಜ್ ದಿವಂಗತ ಹೆಚ್ ಲಿಂಗರೆಡ್ಡಿ ಕುಟುಂಬ ಎಂ ಹೇಮ ಚಂದ್ರ ರೆಡ್ಡಿ, ಹೆಚ್‌. ವಿಷ್ಣುವರ್ಧನ್ ರೆಡ್ಡಿ, ಹೆಚ್ ರಾಮ ಪ್ರಕಾಶ್ ರೆಡ್ಡಿ ಕುಟುಂಬದವರು ಭಾಗವಹಿಸಿ ದೀಪ ಹಚ್ಚುವ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.   


ಸಂಸ್ಥೆಯ ಉಪಾಧ್ಯಕ್ಷ ಎನ್ ಬಸವರಾಜ್ ರವರು ದಿವಂಗತ ಹೆಚ್ ಲಿಂಗರೆಡ್ಡಿ ರವರು ರಾಘವ ಕಲಾ ಮಂದಿರ ಅಭಿವೃದ್ಧಿಗೆ ಬಹಳ ಶ್ರಮಪಟ್ಟರು ಹಾಗೂ ಬಳ್ಳಾರಿ ಸ್ಪಿನ್ನಿಂಗ್ ಮಿಲ್, ಜನತಾ ಬಜಾರ್, ಕಂಪ್ಲಿ ಶುಗರ್ ಫ್ಯಾಕ್ಟರಿ, ಇನ್ನುಳಿದ ಸಂಘಗಳು ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ವ್ಯಕ್ತಪಡಿಸಿದರು. ತದನಂತರ ನಾಟಕ ಸಂಕಲನ ನೇತಿ ರಘುರಾಮ, ಲಾಲ್ ರೆಡ್ಡಿ ನಿರ್ದೇಶನದಲ್ಲಿ ಧೃತರಾಷ್ಟ್ರ ಕೌಗಿಲಿ ತೆಲುಗು ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.  ರಮಣಪ್ಪ ಭಜಂತ್ರಿ ಮತ್ತು ಕಲಾವಿದರು ಭಾಗವಹಿಸಿ ಯಶಸ್ವಿಗೊಳಿಸಿದರು. ಕೃಷ್ಣ ಪಾತ್ರದಲ್ಲಿ ರಮೇಶ್ ಗೌಡ ಪಾಟೀಲ್, ಧೃತರಾಷ್ಟ್ರ ರವೀಂದ್ರ ನಾಥ್,ಭೀಮ-ವಿ. ರಾಮಚಂದ್ರ, ಸುಯೋಧನ-ಲಾಲ್ ರೆಡ್ಡಿ, ಸಂಜಯ ನಾಗಭೂಷಣ, ಧರ್ಮರಾಯ ಪ್ರವೀಣ್ ಕುಮಾರ್, ಗಾಂಧಾರಿ- ಆದೋನಿ ವೀಣಾ, ಅರ್ಜುನ್‌-ನಾಗರಾಜ್, ನಕಲುಡು- ರಾಮ ಮೂರ್ತಿ,ಸಹದೇವಡು- ಶ್ರೀನಿವಾಸ ರೆಡ್ಡಿ ನಿರ್ವಹಿಸಿದರು. 


ಸುದ್ದಿ ಓದಿ