ಬಳ್ಳಾರಿ

ದಿ. ಹೆಚ್. ಲಿಂಗರೆಡ್ಡಿ ಪುಣ್ಯ ಸ್ಮರಣೆ

ದಿ. ಹೆಚ್. ಲಿಂಗರೆಡ್ಡಿ ಪುಣ್ಯ ಸ್ಮರಣೆ

ಬಳ್ಳಾರಿ 25:  ರಾಘವ ಮೆಮೋರಿಯಲ್ ಅಸೋಶಿಯೇಶನ್, ಬಳ್ಳಾರಿ ವತಿಯಿಂದ ದಿ.24ರಂದು ಸಂಜೆ 6-30ಕ್ಕೆ ದಿ. ಹೆಚ್. ಲಿಂಗರೆಡ್ಡಿ 45ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎನ್. ಪ್ರತಾಪ ರೆಡ್ಡಿ, ಡಿ.ಎಲ್. ರಮೇಶ್ ಗೋಪಾಲ್, ಸಂಸ್ಥೆಯ ಅಧ್ಯಕ್ಷರಾದ ಕೆ.ಕೋಟೇಶ್ವರರಾವ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಉಪಾಧ್ಯಕ್ಷ ಎನ್.ಬಸವರಾಜ್, ತೆಲುಗು ಸಂಸ್ಕೃತಿ ಸಮಿತಿ ಅಧ್ಯಕ್ಷರಾದ ಗಾದೆಂ ಗೋಪಾಲಕೃಷ್ಣ , ಕಾರ್ಯದರ್ಶಿ ಎನ್.ಪ್ರಭಾಕರ, ದಿವಂಗತ ಹೆಚ್.ಲಿಂಗಾರೆಡ್ಡಿ ಕುಟುಂಬದವರಾದ ಎಂ.ಹೇಮಚಂದ್ರರೆಡ್ಡಿ, ಹೆಚ್.ವಿಷ್ಣುವರ್ಧನ್‍ರೆಡ್ಡಿ, ಹೆಚ್.ರಾಮಪ್ರಕಾಶ್‍ರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತದನಂತರ ಜಿಲಾನಿ ಬಾಶಾ  ಮತ್ತು ನಳಿನಿ ತಂಡದಿಂದ ಜಾನಪದ ನೃತ್ಯಗಳು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಪಿ ಧನಂಜಯ, ಕೆ ಪೋಪನ ಗೌಡ,ಶ್ರೀ ಎಂ.ರಾಮಾಂಜನೇಯಲು, ಕೆ.ಸುರೇಂದ್ರಬಾಬು, ಪಿ.ಎಲ್.ಗಾದಿಲಿಂಗನಗೌಡ, ಚೆಲ್ಲಾ ಅಮರೇಂದ್ರನಾಥ ಚೌದರಿ, ಎಂ.ಮೋಹನರೆಡ್ಡಿ, ಅರ್.ದೇವಣ್ಣ, ಎ.ಲಕ್ಷ್ಮಿನಾರಾಯಣ, ರಮಣಪ್ಪ ಭಜಂತ್ರಿ ಮತ್ತು ಕಲಾವಿದರು ಭಾಗವಹಿಸಿದ್ದರು.

ಸುದ್ದಿ ಓದಿ