ಮುಂಡರಗಿ

ವಿದ್ಯಾರ್ಥಿಗಳಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮ

ಲೋಕದರ್ಶನ ವರದಿ

ಮುಂಡರಗಿ 11:  ಇಂದಿನ ವಿದ್ಯಾರ್ಥಿಗಳಲ್ಲಿ ಎಲ್ಲಾ ಭಾಷೆಗಳ ಸಂಸ್ಕೃತಿಯ ಬಗ್ಗೆ ಅರಿವಿರಬೇಕು. ಮಾನವ ಕುಲದಲ್ಲಿ ಗಂಡು-ಹೆಣ್ಣು ಎಂಬ ಎರಡು ಜಾತಿಗಳು ಮಾತ್ರ. ಆದರೆ ಅದರಲ್ಲಿ ಬೇದಭಾವವನ್ನು ಮರೆತು ಎಲ್ಲರೂ ಸಮಾನರೂ ಎಂಬ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಆರ್.ಬಿ.ಹಕ್ಕಂಡಿ ಹೇಳಿದರು.

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆಯ ಸಭಾಭವನದಲ್ಲಿ ಜರುಗಿದ 1990-91 ರಿಂದ 1994-95 ನೇ ಸಾಲಿನವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಹಾಗೂ ಶ್ರೀ.ಜೆ.ಟಿ.ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಗೆ ಗುರುವಿನ ಆರ್ಶಿವಾದವೂ ಬೇಕು ಹಾಗೂ ವಿದ್ಯಾರ್ಥಿ ಗಳ ಪ್ರಯತ್ನವೂ ಬೇಕು. ಅಂದಾಗ ಪರಿಪೂರ್ಣ ವಿದ್ಯೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಭಾಗದ ಎಲ್ಲಾ ಹಳೆ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕನ್ನು ಯಶಸ್ವಿಯಾಗಿ ಸಾಗಿಸುವಲ್ಲಿ ಹೆಚ್ಚಿನ ಶ್ರಮವಹಿಸಿ ಎಂದು ಹಾರೈಸಿದರು.

ಹಳೆ ವಿದ್ಯಾರ್ಥಿಗಳಾದ ಬಸವರಾಜ ರಾಮೇನಹಳ್ಳಿ ಹಾಗೂ ಮಂಜುನಾಥ ಮುಧೋಳ ಮಾತನಾಡಿ, ನಮಗೆ ವಿದ್ಯಾಧಾನವನ್ನು ಮಾಡಿದ ಶಾಲಾ ಗುರುಗಳನ್ನು ನಮ್ಮ ತಂದೆ-ತಾಯಿ ಸ್ಥಾನದಲ್ಲಿ ಕಾಣಬೇಕು. ಏಕೆಂದರೆ ಮಕ್ಕಳಿಗೆ ಸಂಸ್ಕೃತಿ ಹಾಗೂ ಜ್ಞಾನವನ್ನು ನೀಡುತ್ತಿರುವುದು ಶಾಲಾ ಗುರುಗಳು. ಹೀಗಾಗಿ ಎಲ್ಲರೂ ಅವರನ್ನು ಅತ್ಯಂತ ಪ್ರೀತಿ ಭಾವನೆಯಿಂದ ಕಾಣಬೇಕು. ಬದಲಾಗಿ ಅವರಿಗೆ ಭಯವನ್ನು ಹುಟ್ಟಿಸುವಂತ ವರ್ತನೆಯನ್ನು ಮಾಡಬಾರದು. ಅವರನ್ನು ಗೌರವದಿಂದ ಪ್ರೋತ್ಸಾವನ್ನು ನೀಡುವುದರಿಂದ ಅವರು ನಮ್ಮ ಮಕ್ಕಳಿಗೆ ಧೈರ್ಯವಾಗಿ ಉತ್ತಮವಾದ ವಿದ್ಯಾಭೋದನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ವೇಳೆ ಹಳೆ ವಿದ್ಯಾರ್ಥಿ ಗಳಾದ ಮಂಜುನಾಥ ಇಟಗಿ ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ಎಂ.ಎಚ್.ತಳಗಡೆ, ಅಶೋಕ ಉಲ್ಲಾಗಡ್ಡಿ, ದೇವಪ್ಪ ಡಂಬಳ, ಗೌರಪ್ಪ ಉಳ್ಳಾಗಡ್ಡಿ ಮತ್ತಿತರರು ಮಾತನಾಡಿದರು.

ಗೌರವ ಸನ್ಮಾನಿತರಾದ ಅಂದಾನಪ್ಪ ಜುಟ್ಲೆ, ಗಂಗಾಧರ ಕೋಟಿ, ಬಸನಗೌಡ ಚನ್ನಪ್ಪಗೌಡ್ರ, ಶಕುಂತಲಾ ಕುರಹಟ್ಟಿ, ಗಿರಿಜವ್ವ ಹೊಸೂರು, ಎಸ್.ಎಚ್.ದಂಡಗದಾಸರ, ಎಂ.ಕೆ.ತಳಗಡೆ, ಆರ್.ಸಿಂಪಿ, ಆರ್.ಬಿ.ಹಕ್ಕಂಡಿ, ಸಂಗಮ್ ಮೇಗಳಮನಿ, ಎನ್.ಎಸ್.ಅಲ್ಲಿಪೂರ, ಎಸ್.ಎಂ.ಪೂಜಾರ ಇವರಿಗೆ ಹಳೆ ವಿದ್ಯಾರ್ಥಿ ಗಳಿಂದ ತಮ್ಮ ವಿದ್ಯಾರ್ಥಿ  ಜೀವನದಲ್ಲಿ ತಮಗೆ ವಿದ್ಯಾಧಾನ ಮಾಡಿದ ಎಲ್ಲಾ ಗುರುವೃಂದದವರಿಗೆ ಪಾದ ಪೂಜೆ ಮಾಡಿ ಗೌರವಿಸಲಾಯಿತು.

ಈ ವೇಳೆ ಹಳೆ ವಿದ್ಯಾರ್ಥಿ ಗಳಾದ, ಆನಂದ ರಾಮೇನಹಳ್ಳಿ, ದೇವಪ್ಪ ಇಟಗಿ, ನಾಗರಾಜ ಮುರುಡಿ, ಈರಣ್ಣ ಕಾಶಿಗಾವಿ, ಈಶಪ್ಪ ಮುದ್ದಿ, ಸಂತೋಷ ಹವಳೆ, ಸುರೇಶ ಬಡಿಗೇರ, ದೇವಪ್ಪ ಚಿಕ್ಕಣ್ಣವರ, ಮಹಾಂತೇಶ ಚುರ್ಚ್ಹಾ ಳಮಠ, ಶೇಖಪ್ಪ ರಾಟಿ, ಅಂದಪ್ಪ ಕಲ್ಲಳ್ಳಿ, ಶಿವು ನವಲಗುಂದ, ಮಂಜುಳಾ ಉಕ್ಕಲಿ, ಶಾಂತವ್ವ ಬಡಿಗೇರ, ಶರಣಮ್ಮ ಬೋರಿನ್, ಗೌರಮ್ಮ ಅರಿಶಿಣದ ಮತ್ತಿತರು ಪಾಲ್ಗೊಂಡಿದ್ದರು 

ಸುದ್ದಿ ಓದಿ