ಸಾಕ್ಷಾತ ಪರಶಿವನ ಅವತಾರವೇ ವಿಶ್ವಾರಾಧ್ಯರು
ಶಿಗ್ಗಾವಿ 19 : ತಾಲೂಕಿನ ಬಿಸನಳ್ಳಿ ಕಾಶಿ ಪುಣ್ಯ ಕ್ಷೇತ್ರದಲ್ಲಿ ಕಾಶಿ ವಿಶ್ವನಾಥಲಿಂಗದಿಂದ ವಿಶ್ವಾರಾಧ್ಯರು ಲಿಂಗೋದ್ಭವವಾದರೆ, ಶೈಲ ಪುಣ್ಯ ಕ್ಷೇತ್ರದ ಮಲ್ಲಿಕಾರ್ಜುನ ಲಿಂಗದಿಂದ ಪಂಡಿತಾರಾಧ್ಯರು ಏಕ ಕಾಲದಲ್ಲಿ ಲಿಂಗೋದ್ಭವವಾಗಿ ಪರಶಿವನಿಂದ ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ, ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಪಡೆದವರಾಗಿದ್ದಾರೆ ಎಂದು ಬಿಸನಳ್ಳಿ ಕಾಶಿ ಶಾಖಾ ಮಠದ ಮುಖ್ಯ ವ್ಯವಸ್ಥಾಪಕ ಗುರುಶಾಂತಪ್ಪ ನರೇಗಲ್ ಹೇಳಿದರು.
ಬಿಸನಳ್ಳಿ ಕಾಶಿ ಶಾಖಾ ಮಠದಲ್ಲಿ ವಿಶ್ವಾರಾಧ್ಯ ಹಾಗು ಪಂಡಿತಾರಾಧ್ಯರ ಜಂಯಂತೋತ್ಸವದ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಸಾಕ್ಷಾತ ಪರಶಿವನ ಅವತಾರವೇ ವಿಶ್ವಾರಾಧ್ಯರು, ಪಂಡಿತಾರಾಧ್ಯರು ಆಗಿದ್ದಾರೆ. ಶಿವನನ್ನು ಸಾಕ್ಷಾತ್ಕಾರ ಮಾಡಿಕೋಳ್ಳಬೇಕಾದರೆ ಕಾಶಿ ವಿಶ್ವನಾಥನ, ಶೈಲಮಲ್ಲಿಕಾರ್ಜುನ ದರ್ಶನ ಬಾಗ್ಯದಿಂದ ಸಾದ್ಯವಿದೆ. ಅಂತಹ ಶಿವ ಸ್ವರೂಪಿಗಳು ಏಕಕಾಲದಲ್ಲಿ ಪರಶಿವನ ಲಿಂಗದಿಂದ ಲಿಂಗೋದ್ಭವವಾಗಿ ಲೋಕ ಕಲ್ಯಾಣಕ ಕಾಯಕ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಸನಳ್ಳಿ ವೇದ ಪಾಠಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಜಿ ಮಾತನಾಡಿ, ಭಕ್ತರು ಶಿವನನ್ನು ಕಣ್ತುಂಬಿಕೋಳ್ಳ ಬೇಕಾದರೆ ದೂರದ ಕಾಶಿಗೆ ತೆರಳಬೇಕಾಗಿತ್ತು. ಆದರೆ ಇಗ ಕಾಶಿ ಸು ಕ್ಷೇತ್ರವೇ ಬಿಸನಳ್ಳಿ ಗ್ರಾಮದಲ್ಲಿ ಬಂದು ನೆಲಸಿರುವುದು ಈ ಬಾಗದ ಭಕ್ತರಿಗೆ ವರದಾನವಾಗಿ ಪರಿಣಮಿಸಿದೆ. ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪಾದ ಸ್ಪರ್ಶದಿಂದ ಈ ಬಿಸನಳ್ಳಿ ಗ್ರಾಮದ ಮಣ್ಣು ಭಸ್ಮಕ್ಕೆ ಸರಿಸಮಾನವಾಗಿ ಪಾವಿತ್ರ್ಯೆತೆಯನ್ನು ಹೋಂದಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೋಂದುತ್ತ ಸಾಗಿರುವುದು ಈ ಬಾಗದ ಭಕ್ತರ ಪುಣ್ಯದ ಪ್ರತಿಫಲವಾಗಿದೆ ಎಂದು ಹೇಳಿದರು.
ತನ್ನಿಮಿತ್ಯ ಪ್ರಾಥ:ಕಾಲ ಕಾಶಿ ಶಾಖಾಮಠದಲ್ಲಿ ವಿಶ್ವಾರಾಧ್ಯರ, ಪಂಡಿತಾರಾಧ್ಯರ ಭಾವಚಿತ್ರಕ್ಕೆ ಹೋಮ, ಹವನ, ಭಿಲ್ವಾರ್ಚನೆ ಸೇರಿದಂತೆ ವಿವಿದ ಪೂಜಾ ಕೈಂಕರ್ಯಗಳು ಪಾಠಶಾಲೆಯ ವಟುಗಳಿಂದ ಶ್ರದ್ಧಾ ಭಕ್ತಿಯಿಂದ ನಡೆದವು. ನಂತರ ಹರಿದುಬಂದ ಭಕ್ತಜನಸಾಗರಕೆ ಮಹಾ ಪ್ರಸಾದ ಸೇವೆ ನಡೆಯಿತು.
ಪಾಠ ಶಾಲೆಯ ಉಪಾಧ್ಯಕ್ಷ ಶಂಬಣ್ಣ ಮಾ.ಪ.ಶೆಟ್ಟರ, ನಾರಾಯಣಪುರ ಗ್ರಾ.ಪಂ.ಸದಸ್ಯ ಶಂಭೂಲಿಂಗಪ್ಪ ಆಜೂರ, ಮುರಗೇಶ ಆಜೂರ, ಪರಶುರಾಮ ನರೇಗಲ್, ಪರಶುರಾಮ ಕುದರಿ, ನಾಗರಾಜ ಹೊಸಮನಿ, ಗದಿಗೇಪ್ಪ ಮಾ.ಪ.ಶೆಟ್ಟರ, ಗಂಗಾಧರ ಬಡ್ಡಿ, ಉಮೇಶ ಅಂಗಡಿ, ಬದ್ರಣ್ಣ ಆಜೂರ, ನಿಂಗಪ್ಪ ಹುಬ್ಬಳ್ಳಿ ಸೇರಿದಂತೆ ಪಾಠಶಾಲೆಯ ವಟುಗಳು ಉಪಸ್ಥಿತರಿದ್ದರು.