ರಾಮದುರ್ಗ

ರಾಮದುರ್ಗ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ವೃದ್ಧಿ ; ಶಾಸಕ ಮಹಾದೇವಪ್ಪ ಯಾದವಾಡ ಹೇಳಿಕೆ: ಬಿಜಗುಪ್ಪಿ, ಕಡ್ಲಿಕೊಪ್ಪ ಗ್ರಾಮಗಳ 210 ಹೆಕ್ಟರ್ ಭೂ ಪ್ರದೇಶ ನೀರಾವರಿ

ರಾಮದುರ್ಗ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ವೃದ್ಧಿ ; ಶಾಸಕ ಮಹಾದೇವಪ್ಪ ಯಾದವಾಡ ಹೇಳಿಕೆ: ಬಿಜಗುಪ್ಪಿ, ಕಡ್ಲಿಕೊಪ್ಪ ಗ್ರಾಮಗಳ 210 ಹೆಕ್ಟರ್ ಭೂ ಪ್ರದೇಶ ನೀರಾವರಿ

ಲೋಕದರ್ಶನ ವರದಿ 

ರಾಮದುರ್ಗ 

ಹಳ್ಳಗಳಿಗೆ ಬ್ರೀಡ್ಜ್‌ ಕಂ ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರ ಜಮೀನುಗಳಲ್ಲಿರುವ ಬೋರ್‌ವೆಲ್‌ಗಳ ನೀರು ಹೆಚ್ಚಾಗಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಗುತ್ತಿಗೆದಾರರು ಹಾಗೂ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

2 ಕೋಟಿ 80 ಲಕ್ಷ ವೆಚ್ಚದಲ್ಲಿ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಹತ್ತಿರದ ಹಳ್ಳಕ್ಕೆ, 2 ಕೋಟಿ 20 ಲಕ್ಷ ವೆಚ್ಚದಲ್ಲಿ ಬಿಜಗುಪ್ಪಿ ಗ್ರಾಮದ ಹತ್ತಿರ ಬಿಜಗುಪ್ಪಿಯಿಂದ ಹೊಸಕೋಟಿಗೆ ಸಂಪರ್ಕ ಕಲ್ಪಿಸುವ ಹಳ್ಳಿಗಳಿಗೆ ಬ್ರೀಡ್ಜ್‌ ಕಂ. ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಬಿಜಗುಪ್ಪಿಯಲ್ಲಿ 100 ಹೆಕ್ಟರ್ ಭೂ ಪ್ರದೇಶ ಹಾಗೂ ಕಡ್ಲಿಕೊಪ್ಪ ಗ್ರಾಮದ 110 ಏಕರೆ ಭೂ ಪ್ರದೇಶದ ನೀರಾವರಿಗೆ ಕಾಮಗಾರಿಗಳು ವರವಾಗಲಿವೆ. ಸರಕಾರ ಅನುದಾನ ಒದಗಿಸಿದ ಉದ್ದೇಶ ಇಡೇರಬೇಕಾದಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು. ಇಲಾಖೆಯ ಅಧಿಕಾರಿಗಳು ಕಾಲುವೆ ನೀರು ಸ್ಥಗೀತಗೊಳ್ಳುವ ಸಂದರ್ಭಗಳನ್ನು ಅರಿತು ಗೇಟ್‌ಗಳನ್ನು ಮುಚ್ಚಿದಲ್ಲಿ ಹಳ್ಳದ ತಗ್ಗು ಪ್ರದೇಶದಲ್ಲಿ ನೀರು ಸಂಗ್ರವಾಗಿ ಭೂಮಿಯಲ್ಲಿ ಇಂಗಲು ಸಹಾಯವಾಗುತ್ತದೆ. ಬೋರ್‌ವೆಲ್‌ಗಳು ಪುನಃಚೇತನಗೊಂಡು ರೈತರು ನೀರಾವರಿ ಪ್ರದೇಶಗಳನ್ನು ವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ ಎಂದರು. 

ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಬಿಜಗುಪ್ಪಿಯಲ್ಲಿ ನಡೆದ ಭೂಮಿಪೂಜಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ಮಾಜಿ ಗ್ರಾ.ಪಂ ಅಧ್ಯಕ್ಷ ಪತ್ರೆಪ್ಪ ಕೊಪ್ಪದ, ವೀರುಪಾಕ್ಷಪ್ಪ ಸಕ್ರಿ ಸೇರಿದಂತೆ ಗ್ರಾಮಸ್ಥರು ಇದ್ದರು. 

ಕಡ್ಲಿಕೊಪ್ಪ ಗ್ರಾಮದ ಹಳ್ಳದ ಹತ್ತಿರ ನಡೆದ ಭೂಮಿಪೂಜೆಯಲ್ಲಿ ಮಾಜಿ ಜಿ.ಪಂ ಸದಸ್ಯ ರೇಣಪ್ಪ ಸೋಮಗೊಂಡ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಠ್ಠಲ ಸೋಮಗೊಂಡ, ಉಪಾದ್ಯಕ್ಷೆ ಹಣಮವ್ವ ಸುರೇಬಾನ, ಟಿಎಪಿಸಿಎಂಎಸ್ ಸದಸ್ಯ ಕುಬೇರಗೌಡ ಪಾಟೀಲ, ಬಸವರಾಜ ಸೋಮಗೊಂಡ, ಗ್ರಾ.ಪಂ ಸದಸ್ಯರಾದ ಈರನಗೌಡ ಪಾಟೀಲ, ಮಂಜುಳಾ ಶರಮಗೊಂಡ, ಮೌನೇಶ ಕಂಬಾರ, ಹಣಮಂತ ಧರಿಗೊಂಡ, ಹಣಮಂತ ದಾಟನಾಳ, ಮಹಾಂತೇಶ ನವಲಗುಂದ, ಉಮೇಶ ನವಲಗುಂದ, ಮಹಾದೇವ ಶರಮಗೊಂಡ, ಸಣ್ಣ ನೀರಾವರಿ ಇಲಾಖೆಯ ಎಇಇ ಎಸ್‌.ಎಸ್, ಮೆಳವಂಕಿ, ಗುತ್ತಿಗೆದಾರ ಎಂ.ಬಿ. ಬಸಿಡೋಣಿ, ಕಡ್ಲಿಕೊಪ್ಪ, ಮುಳ್ಳೂರ, ಮುದೇನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ