ಕೊರೊನಾ ಲಸಿಕಾ ಅಭಿಯಾನಕ್ಕೆ ಉತ್ತಮ ಬೆಂಬಲ
ಲೋಕದರ್ಶನ ವರದಿ
ಸಿರುಗುಪ್ಪ 22: ಕೋವಿಡ್-19 ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಂದ ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಲಸಿಕೆಯೊಂದೇ ನಮಗಿರುವ ಪರಿಹಾರ ಉತ್ಸಾಹದಿಂದ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸಿರುಗುಪ್ಪ ನಗರದ ಮನೆ ಮನೆ ತೆರಳಿ ಜನರಲ್ಲಿ ಮನವಿ ಮಾಡಿದರು.
ಸಿರುಗುಪ್ಪ ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜಿಲ್ ನಲ್ಲಿ ಬುಧವಾರ ನಗರಸಭೆಯ ಅಧ್ಯಕ್ಷ ಡಿ ನಾಗರಾಜ ಅಂಗನವಾಡಿ ಕಾರ್ಯಕರ್ತೆ ಕೆ. ದುರ್ಗಾ ಭವಾನಿ, ಆಶಾ, ಕಾರ್ಯಕರ್ತೆ ಸಲೋಮಿ, ಸ್ಟಾಫ್ ನರ್ಸ್ ಎಸ್. ಶ್ವೇತಾ, ಪ್ರೌಢಶಾಲೆಯ ಪಿಟಿಕೆವಿ ದಾನಪ್ಪ, ನಾಗೇಂದ್ರ್ಪ ಆರೋಗ್ಯ ಇಲಾಖೆಯಿಂದ ಸಾಮಾಜಿಕ ಕಾರ್ಯಕರ್ತ ಲೋಕ ಶಿಕ್ಷಣ ನಿರ್ದೇಶನಾಲಯದ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಎ. ಅಬ್ದುಲ್ ನಬಿ, ಮತ್ತು ಅವರ ಜರೀನಾಬೇಗಂ ಮತ್ತಿತರರಿಗೆ ಕೋವಿಡ್ ಲಸಿಕೆ ಹಾಕಿಸಿ ಮತ್ತು ಮೊಹಲ್ಲಾದಲ್ಲಿನ ಜನರಿಗೆ ಲಸಿಕೆ ಹಾಕಲಾಯಿತು .ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಎಸ್. ಮಂಜುನಾಥ, ತಹಸೀಲ್ದಾರ್ ಎನ್ .ಆರ್. ಮಂಜುನಾಥ ಸ್ವಾಮಿ, ನಗರಸಭೆ ಪೌರಾಯುಕ್ತ ರಾಘವೇಂದ್ರಗುರು ಸಿಡಿಪಿಒ ಎ .ಜಲಾಲಪ್ಪ, ಬಿಇಒ ಪಿ .ಡಿ. ಭಜಂತ್ರಿ ತಾಲ್ಲೂಕ್ ಪಂಚಾಯತ್ ಇಒ ಶಿವಪ್ಪ ಸುಬೇದಾರ್, ಆರೊ?ಗ್ಯ ಅಧಿಕಾರಿ ಡಾ. ವಿದ್ಯಾಶ್ರೀ, ಈರಣ್ಣ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅವರು ಮನೆ ಮನೆ ತೆರಳಿ ಕರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು .