ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಭವ್ಯ ಸ್ವಾಗತ
ಬೈಲಹೊಂಗಲ 04: ಭಾರತೀಯ ಸೇನೆಯಲ್ಲಿ ಸುದೀರ್ಘ 26 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯನ್ನು ಪಡೆದುಕೊಂಡು ನಗರಕ್ಕೆ ಆಗಮಿಸಿದ ಸೈನಿಕ ಸುರೇಶ ಶಂಕ್ರಪ್ಪ ಖನಗಾವಿ ಅವರನ್ನು ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಅವರ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಮಾಜಿ ಸೈನಿಕರ ಸಂಘ ಹಾಗೂ ಅನೇಕರು ಗೌರವಪೂರ್ವಕವಾಗಿ ಸೈನಿಕನನ್ನು ನಗರಕ್ಕೆ ಬರಮಾಡಿಕೊಂಡರು.
ಕನ್ನಡಪರ ಸಂಘಟನೆಯ ಮುಖಂಡ ಸುಭಾಷ ತುರಮರಿ, ಉದ್ಯಮಿ ವಿಜಯ ಮೆಟಗುಡ್, ಪುರಸಭೆ ಸದಸ್ಯ ಗುರು ಮೆಟಗುಡ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಗುರನ್ನವರ, ರವಿ ತುರಮರಿ, ಉಪನ್ಯಾಸಕ ರಮೇಶ ಯರಗಟ್ಟಿ, ಯುವ ಮುಖಂಡ ಸಂತೋಷ ಹಡಪದ, ಶಿವಾನಂದ ಇಂಚಲ, ಮಲ್ಲಿಕಾರ್ಜುನ ಇಂಚಲ, ಸಂತೋಷ ಬೋರಕನವರ, ಡಾ ಮಹಾಂತೇಶ ಕಳ್ಳಿಬಡ್ಡಿ, ಪ್ರಾಚಾರ್ಯ ಡಾ. ಶಿವಕುಮಾರ ಪರಾಂಡೆ, ಆನಂದ ವಾಲಿ, ಸಂಗಪ್ಪ ಕಾದ್ರೊಳ್ಳಿ, ಜಗದೀಶ ಲೋಕಾಪುರ, ರಮೇಶ ಇಂಚಲ ರಾಜು ತಟ್ಟಿಮನಿ, ರಾಜು ಕಡಕೋಳ, ಪ್ರವೀಣ ಹುಣಸಿಕಟ್ಟಿ, ಈರಣ್ಣ ತಟ್ಟಿಮನಿ, ವೆಂಕಟೇಶ್ ದಾಸೋಗ, ಮಂಜು ಮರಶೆಟ್ಟಿ, ರಘು ಶೀಗಿಹಳ್ಳಿ, ಗೆಳೆಯರ ಬಳಗ ಸದಸ್ಯರು ಇದ್ದರು.