ವಿಜಯಪುರ

ಶರಣ ನೂಲಿ ಚಂದಯ್ಯ ಜಯಂತಿ ವೈಭವದಿಂದ ಆಚರಣೆ

ಶರಣ ನೂಲಿ ಚಂದಯ್ಯ ಜಯಂತಿ ವೈಭವದಿಂದ ಆಚರಣೆ

ಲೋಕದರ್ಶನ ವರದಿ  

ಆಲಮೇಲೆ, ಆ. 29: 12ನೇ ಶತಮಾನದ ಶರಣ ನೂಲಿ ಚಂದಯ್ಯ ಅವರ ಜಯಂತಿಯನ್ನು ಆಲಮೇಲೆಯಲ್ಲಿ ವೈಭವದಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಅರ್ಜುನಗಿ ಶ್ರೀಮಠದ ಪೂಜ್ಯರಾದ ಸಂಗನ ಬಸವ ಶಿವಾಚಾರ್ಯರು ಶರಣ ನೂಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ನೂಲಿ ಚಂದಯ್ಯ ಅವರು ಕಾಯಕದ ಮೂಲಕ ದಾಸೋಹ ಸೇವೆ ಮಾಡುತ್ತಾ, ಲಿಂಗಪೂಜೆಯ ಮಹತ್ವವನ್ನು ಸಾರಿದ ಮಹಾನ್ ಶರಣರಾಗಿದ್ದರು. ಅವರು ನಡೆದುಬಂದ ಭಕ್ತಿ ಮಾರ್ಗವು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಉಮರ್ ಬಿಳವಾರ, ಪಪಂ ಸದಸ್ಯರಾದ ಡಾ. ಸಂಜೀವ ಎಂಟಮನ, ಚಂದು ಕುರುಬತಹಳ್ಳಿ, ಅಶೋಕ ಕೋಳಾರಿ, ಶಶಿಧರ ನಾಯಕಕೊಡಿ, ಪ್ರಭು ವಾಲಿಕರ, ದಯಾನಂದ ನಾರಾಯಣಕರ, ಭಗವಂತರಾಯ, ಆಲಮೇಲಕರ ವಿದ್ಯಾಧರ, ರಸ್ತಾಪುರ ಮಠದ ಶುಭಾಷ ಸಾಲಕ್ಕಿ, ಯಲ್ಲಪ್ಪ ಬುರುಡ, ಮಹಾದೇವ ಕೊರುಬು, ಪುಂಡಲಿಕ ಕಾಶಿನಾಥ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ