ಅಡರಕಟ್ಟಿ ಗ್ರಾಮದಲ್ಲಿ ಸಂಭ್ರಮದ ಗಣೇಶೋತ್ಸವ
ಲಕ್ಷ್ಮೇಶ್ವರ, ಸೆ. 24: ತಾಲೂಕಿನ ಅಡರಕಟ್ಟಿ ಗ್ರಾಮದ ಶ್ರೀ ಕರಿಯಮ್ಮ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಸೇವಾ ಆಕಾಂಕ್ಷಿ ಎಸ್. ಪೂಜಾರ ಅವರನ್ನು ಹಾಗೂ ಗ್ರಾಮದ ಗುರು-ಹಿರಿಯರನ್ನು ಗಣಪತಿ ಯುವಕ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ನಂತರ ಗ್ರಾಮದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿ ಗಣಪತಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಶ್ರೀ ಕರಿಯಮ್ಮ ಯುವಕ ಮಂಡಳಿಯ ಮುಖಂಡರು, ಅಡರಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಪಾಟೀಲ, ಮಾಂತೇಶ ಅಂಗಡಿ, ಮಾಂತೇಶ ಹವಳದ, ಚನ್ನಬಸಪ್ಪ ಅಬನೂರ, ಕುಬೇರ್ಪ ಹವಳದ, ಮಾಂತೇಶ ಹವಳದ, ಲಕ್ಷ್ಮಣ ಮರಾಠಿ, ಅಶೋಕ ರೊಳ್ಳಿ, ಮಂಜುನಾಥ ಮೆಣಸಿನಕಾಯಿ, ನಾರಾಯಣ ಮರಾಠಿ, ಮಲ್ಲಿಕಾರ್ಜುನ ಮರಾಠಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.