ತಾಳಿಕೋಟಿ

ಮಹಿಳೆಯರಿಗೆ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಪಂ ಮುತ್ತಿಗೆ

ಮಹಿಳೆಯರಿಗೆ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಪಂ ಮುತ್ತಿಗೆ

ತಾಳಿಕೋಟೆ14: ತಾಲೂಕಿನ ತುಂಬಗಿ ಗ್ರಾಮದಲ್ಲಿ ಬಹುದಿನಗಳಿಂದ ಇರುವ ಮಹಿಳಾ ಶೌಚಾಲಯ ಸಮಸ್ಯೆ ಬಗೆಹರಿಸುವಂತೆ:  ಒತ್ತಾಯಿಸಿ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 

ತುಂಬಗಿ ಗ್ರಾಮದಲ್ಲಿ ಮಹಿಳೆಯರಿಗೆ ಶೌಚಕ್ಕಾಗಿ ತಿರ್ವವಾದ ತೊಂದರೆ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಜು.8ರಂದು ಸಮಸ್ಯೆ ಬಗೆಹರಿಸುವಂತೆ ಲಿಖಿತ ಮನವಿ ಮಾಡಿ ಸಮಸ್ಯೆ ಬಗೆಹರಿಸಿದ್ದರೆ ಗ್ರಾಮ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ ನಡೆಸುವದಾಗಿ ತಿಳಿಸಲಾಗಿತ್ತು. ಸಮಸ್ಯೆ ಬಗೆಹರಿಸದಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಗೆ ಬೀಗ ಜಡಿಯಲು ಆಗಮಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗನಗೌಡ ಚೌದರಿ, ಅಭಿವೃದ್ದಿ ಅಧಿಕಾರಿ ಪ್ರಭುದೇವ ಜೇವುರ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಸಾಮೂಹಿಕ ಶೌಚಾಲಯ ಒದಗಿಸಲು ಸರ್ಕಾರದಿಂದ ಮಂಜೂರಾತಿಯಿಲ್ಲ, ವೈಯಕ್ತಿಕ ಕಟ್ಟಿಕೊಳ್ಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸತಿಗೆ ಸ್ಥಳವಿಲ್ಲ, ಇನ್ನು ಶೌಚಾಲಯಕ್ಕೆ ಸ್ಥಳ ಎಲ್ಲಿಂದ ತರೋಣ, ಜೊತೆಗೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದ್ದರಿಂದ ಕನಿಷ್ಟ ತಡೆಗೋಡೆಯಾದರೂ ನಿರ್ಮಿಸಿ ಎಂದು ಅಲ್ಲಿದ್ದ ಮಹಿಳೆಯರು ಮನವಿ ಮಾಡಿದರು. ಇದಕ್ಕೆ ಪ್ರತಿಭಟನಾಕಾರರರು ಒಪ್ಪಲಿಲ್ಲ. ತಾಪಂ ಇಓ ಬಿ.ಆರ್‌.ಬಿರಾದಾರ ಅವರೊಂದಿಗೆ ದೂರವಾಣಿಯಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸರ್ಕಾರವು ಬಯಲು ಮುಕ್ತ ಶೌಚಾಲಯ ಹಿನ್ನೆಲೆಯಲ್ಲಿ ಸಾಮೂಹಿಕ ಶೌಚಾಲಯ ಕೈ ಬಿಟ್ಟು ವೈಯಕ್ತಿಕ ಶೌಚಾಲಯಕ್ಕೆ ಅವಕಾಶ ನೀಡಿದೆ. ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನವೇ ಇಲ್ಲ ಎಂದು ಸಮಜಾಯಿಸಿ ನೀಡಿದರು. ನಂತರ ಗ್ರಾಮ ಪಂಚಯತ ವತಿಯಿಂದ ಬಿಂಜಲಬಾವಿ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಮಾಡಿಕೊಡುವದಾಗಿ ತಿಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. 

 ಈ ಸಂದರ್ಭದಲ್ಲಿ ಪ್ರಮುಖರಾದ ಶಿವಯ್ಯ ಸಾರಥಿಮಠ, ಹಣಮಂತರಾಯ ಹಾಲರೆಡ್ಡಿ, ಶಿವು ಕಂದಳ್ಳಿ, ರಾಮನಗೌಡ ತುಂಬಗಿ,  ರಾಜು ಮಂಗ್ಯಾಳ,  ದೇವಪ್ಪ ಮಾದರ,  ಅಂಬರೀಶ್ ಅಂಗಡಿ,  ಬಸಲಿಂಗಮ್ಮ ತುಂಬಿಗಿ,  ಪಾರ್ವತಿ ಹಾಲರೆಡ್ಡಿ,  ಜಯಶ್ರೀ ದಿಡ್ಡಿಮನಿ, ನೀಲಮ್ಮ ಪತ್ತಾರ, ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ