ಚಿಕ್ಕೋಡಿ

ಗ್ರಾಪಂಗೆ ಆಯ್ಕೆ: ನಿಸ್ವಾರ್ಥ ಸೇವೆಗೆ ದರೆತ ಫ್ರತಿಫಲ

ಗ್ರಾಪಂಗೆ ಆಯ್ಕೆ: ನಿಸ್ವಾರ್ಥ ಸೇವೆಗೆ ದರೆತ ಫ್ರತಿಫಲ

ಮಾಂಜರಿ 3: ನಮ್ಮ ಸಂಸ್ಕೃತಿಯಲ್ಲಿ ಮಾಡಿದ ದಾನ ಎಂದಿಗೂ ವ್ಯರ್ಥವಾಗುವುದಿಲ್ಲಾ, ಇದೊಕ್ಕೊಂದು ಉದಾಹರಣೆ ನಿಪ್ಪಾಣಿ ತಾಲೂಕಿನ ಕೋಗನೋಳಿ ಗ್ರಾಮದ ಯುವಕ ನೀರುದಾನ ಮಾಡಿದ ಪ್ರತಿಫಲ ದೊರಕಿದೆ. 

ಕೋಗನೋಳಿ ಗ್ರಾಮದಲ್ಲಿನ ಹಾಲಸಿದ್ದನಾಥ ವಸಹಾತಿನಲ್ಲಿ (ಮಡ್ಡಿ ಪರಿಸರ) ವಾಸಿಸುವ ಜನತೆಗೆ ಸ್ವಂತ ಖರ್ಚಿನಿಂದ ಸುನೀಲ ಕಾವಳೆಯವರು ಕಳೆದ ಆರು ವರ್ಷಗಳಿಂದ ತನ್ನ ಕೊಳವೆ ಬಾವಿಯ ಮೂಲಕ ಸುಮಾರು 2000 ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಯಾವೂದೇ ಅಧಿಕಾರವಿಲ್ಲದಿದ್ದರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ.

ಸ್ವಂತ ಹೊಲಕ್ಕಾಗಿ ನೀರು ಹಾಯಿಸಲು ಕೊಳವೆ ಬಾವಿಯನ್ನು ಕೊರೆಯಿಸಿದ್ದರು. ಈ ಕೊಳವೆಬಾವಿಯ ನೀರನ್ನು ತರಲು ಮಹಿಳೆಯರು, ಚಿಕ್ಕ ಮಕ್ಕಳು ರಾಡಿಯಲ್ಲಿ ಏಳುತ್ತಾ ಬಿಳುತ್ತಾ ಬರುವುದನ್ನು ಕಂಡು, ಇವರೆಲ್ಲರಿಗೆ ತೊಂದರೆಯಾಗಬಾರದು ಎಂದು ಕುಡಿಯುವ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದರು. ಕಳೆದ ಆರು ವರ್ಷಗಳಿಂದ ಕುಡಿಯುವ ನೀರು ಕಡಿಮೆ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ. ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಿಂದ ಇವರಗೆ ಆಧುನಿಕ ಭಗೀರಥ ಎನ್ನುತ್ತಾರೆ ಹಾಲಸಿದ್ದನಾಥ ವಸಾಹತಿನವರು.

ಸುನೀಲ ಕಾವಳೆಯವರು ಒಂಕಾರ ಯುವಕ ಮಂಡಳದ ಮುಖಾಂತರ ಮಾಹಾಪ್ರಸಾದ ಸೇರಿದಂತೆ ವಿವಿಧ ಸಮಾಜಿಕ ಕಾರ್ಯಗಳನ್ನು ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಸಾಹತಿ ಜನ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆಗೆ ನಿಲ್ಲಿಸಿ ಭಾರಿ ಮತಗಳಿಂದ ಚುನಾಯಿಸಿದ್ದಾರೆ. ನಿಸ್ವಾರ್ಥ ಭಾವನೆÉಯಿಂದ ಕೆಲಸ ಮಾಡಿದರೆ ಆ ಭಗವಂತನು ಕೈಹಿಡಿಯುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ. 

ನಾನು ಹಾಲಸಿದ್ದನಾಥ ವಸಾಹತಿನಲ್ಲಿ ಕಳೆದ ಆರು ವರ್ಷಗಳಿಂದ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಿಂದ ನಾನು ಇಂದು ಗ್ರಾಪಂ ಸದಸ್ಯನಾಗಿದ್ದು, ಜನಸೇವೆ ಮಾಡುವುದೇ ನನ್ನ ಗುರಿ.

-ಸುನೀಲ ಕಾವಳೆಯವರು.  


ಸುದ್ದಿ ಓದಿ