ತಾಳಿಕೋಟಿ

ತುಂಬಗಿ ಗ್ರಾಮ ಪಂಚಾಯತಿಯ ಗ್ರಾಮ ಸಭೆ

ತುಂಬಗಿ ಗ್ರಾಮ ಪಂಚಾಯತಿಯ ಗ್ರಾಮ ಸಭೆ

ತಾಳಿಕೋಟೆ14: ತುಂಬಗಿ  ಗ್ರಾಮ ಪಂಚಾಯತಿನ 2022-23ನೇ ಗ್ರಾಮ ಸಭೆ ಜು. 14ರಂದು ತುಂಬುಗಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗನಗೌಡ ಶರಣಪ್ಪ ಗೌಡ ಚೌದ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯ ನೋಡಲ ಅಧಿಕಾರಿಯಾಗಿ ಅರಣ್ಯ ಇಲಾಖೆಯ ಮಹಾಂತೇಶ ಹಾದಿಮನಿ ಸಭೆಯನ್ನು ಮುನ್ನಡೆಸಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಟಿ ಆರ್ ಜೇವೂರ ಮಾತನಾಡಿ ಪಂಚಾಯತಿಯ ಎನ್ ಆರ್ ಜಿ ಕಾಮಗಾರಿಗಳ ಪಟ್ಟಿಯನ್ನು ಓದಿ ಸಾರ್ವಜನಿಕರಿಗೆ ತಿಳಿಸಿದರು. ಅಂಬೇಡ್ಕರ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ  ಮೂರು ಹಳ್ಳಿಗಳ ಫಲಾನುಭವಿಗಳ ಪಟ್ಟಿಯನ್ನು ಅನುಮೋದನೆ ನೀಡಲಾಯಿತು. ಉಳಿದ ತುಂಬಗಿ ಗ್ರಾಮದ ಫಲಾನುಭವಿಗಳ ಪಟ್ಟಿಯನ್ನು ಸಭೆಯಲ್ಲಿ ಅನುಮೋದನೆ ದೊರೆತಿರುವುದಿಲ್ಲ ಆದ ಕಾರಣ  ಮುಂದಿನ ದಿನಮಾನಗಳಲ್ಲಿ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕೆ ತಂದು ಅಂತಿಮಗೊಳಿಸಲಾಗುವುದೆಂದು ತಿಳಿಸಿದರು. ಈ ಗ್ರಾಮ ಪಂಚಾಯತಿ ಒಳಗೊಂಡ ಹಳ್ಳಿಗಳಾದ ಹೂವಿನಹಳ್ಳಿ, ಹೊಸಳ್ಳಿ, ಪತ್ತೆಪುರ್ ಗ್ರಾಮದ  ಜನರು ಗ್ರಾಮ ಸಭೆಗೆ ಭಾಗವಹಿಸಿರುವುದಿಲ್ಲ. ಗ್ರಾ ಪಂ ಸದಸ್ಯರು ಹಾಗೂ ಪಿ ಡಿ ಒ ಮಧ್ಯೆ ರಸ್ತೆ ಅಗಲೀಕರಣ ಸಲುವಾಗಿ ಠರಾವು ಪಾಸು ಮಾಡಿಕೊಡು ಎಂದು ವಾಕ್ಸಮರ ಜರುಗಿತು. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡದೆ ಗ್ರಾಮ ಸಭೆ ಮೋಟಕು ಗೊಳಿಸಲಾಯಿತು. ಈ ರೀತಿಯಾಗಿ ಗ್ರಾಮ ಸಭೆಯು ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ದೊರಕದೆ ಮನೆಗೆ ನಡೆಯುವಂತ ಪರಿಸ್ಥಿತಿ ಉಂಟಾಗಿದೆ. ಈ ಸಮಯದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಅಕ್ಷತಾ ಬಿರಾದಾರ, ಸದಸ್ಯರಾದ ರಾಮನಗೌಡ ಹಾದಿಮನಿ, ಸುಭಾಶ  ಮದ್ದರಕಿ,  ಶಂಕ್ರಮ್ಮ ಭಜಂತ್ರಿ, ಅನ್ನಪೂರ್ಣ ಸಜ್ಜನ, ಶರಣಬಸವರಾಜ ಕೊಳ್ಳಿ, ಶರಣಮ್ಮ ನಾಯ್ಕೊಡಿ, ಮಲ್ಲಮ್ಮ ದಿಡ್ಡಿಮನಿ, ಕಸ್ತೂರಿಬಾಯಿ ಕಾಮರೆಡ್ಡಿ, ಅಶೋಕ ಉಪ್ಪಲ ದಿನ್ನಿ, ಮದೀನಾಬಿ ಮಕಂದಾರ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು ಮುತ್ತು ಗ್ರಾಮಸ್ಥರು ಹಾಜರಿದ್ದರು. 


ಸುದ್ದಿ ಓದಿ