ಗ್ರಾಮ ಪಂಚಾಯತ ಚುನಾವಣಾ ಫಲಿತಾಂಶ: ವಿಜಯೋತ್ಸವ
ತಾಳಿಕೋಟಿ : ಸಮೀಪದ ಇಂಗಳಗೇರಿ ಗ್ರಾಮ ಪಂಚಾಯತಗೆ ಇತ್ತೀಚಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು. ಇಂಗಳಗೆರಿ ಗ್ರಾಮ ಎಲ್ಲಾ 5 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೆ ಇಂಗಳಗೆರಿ ಗ್ರಾಮದಿಂದ ಆಯ್ಕೆಯಾದ 5 ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಟ್ಟಣದ ಆರಾಧ್ಯದ್ಯೆವ ಶ್ರೀ ಖಾದ್ಗತೇಶ್ವರ ಮಠಕ್ಕೆ ಭೇಟಿ ನೀಡಿ ಪೂಜೆಗ್ಯೆದು ಆಶೀರ್ವಾದ ಪಡೆದುಕೊಂಡರು. ನಂತರ ಸ್ಥಳಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಬಸವೇಶ್ವರ ಸರ್ಕಲ್ನಲ್ಲಿ ಜಮಾಯಿಸಿ ಪರಸ್ಪರ ಗುಲಾಲ ಎರಚಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ವಿಜಯೋತ್ಸವದ ನೇತೃತ್ವವನ್ನು ಪುರಸಭೆ ಸದಸ್ಯ ನಿಂಗರಾಜ ಕುಂಟೋಜಿ ವಹಿಸಿದ್ದರು ಪುರಸಭೆ ಸದಸ್ಯರಾದ ಜಯಸಿಂಗ ಮೂಲಿಮನಿ, ನಮೋ ರಘು, ಶರಣು ಗೊಟಗುಣಕಿ, ವಿಸ್ತಾರಕ ಶಿವಪ್ಪ ಸವದಿ, ಮುಖಂಡ ಶಿವಶಂಕರ ಹಿರೇಮಠ, ಈಶ್ವರ ಹೂಗಾರ, ಗೌರಮ್ಮ ಕುಂಬಾರ, ಸುವರ್ಣ ಬಿರಾದರ, ವಿರೇಶ ಸಾಸನೂರ, ಸಾಗರ್ ಕಾಜಗರ್, ನೂತನವಾಗಿ ಆಯ್ಕೆಯಾದ ಸದಸ್ಯರಾದ ಶ್ರೀಮತಿ ಗುರುಸಿದ್ದಮ್ಮ ದಿಡ್ಡಿ, ಮಲ್ಲಿಕಾರ್ಜುನ ದೋರನಹಳ್ಳಿ, ಸಾವಿತ್ರಿ ಸಾಸನೂರ, ದಂಡಮ್ಮ ಶಿವಪೂರ, ಸಿದ್ದಣ್ಣ ಪಡೇಕನೂರ ಮತ್ತಿತರರು ಇದ್ದರು.