ಮುಂಡರಗಿ

ಸರ್ಕಾರ ರೈತರ ಬೆಳೆಹಾನಿ ನೀಡಬೇಕು: ಗೌಡರ

ಸರ್ಕಾರ ರೈತರ ಬೆಳೆಹಾನಿ ನೀಡಬೇಕು: ಗೌಡರ

ಲೋಕದರ್ಶನ ವರದಿ 

ಮುಂಡರಗಿ 10:  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಕೆಲವು ಗ್ರಾಮಗಳ ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಬಿತ್ತಿದ ಬೆಳೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ತಿಳಿಸಿದರು. 

  ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ ಮುರುಡಿ, ಮುರುಡಿತಾಂಡಾ, ಬಾಗೇವಾಡಿ ಮೊದಲಾದ ಗ್ರಾಮಗಳಲ್ಲಿ ನಿರಂತರ ಮಳೆಯಾಗಿ ಬೆಳೆಗಳು ಹಾನಿಯಾಗುತ್ತಿವೆ. 

ನಿರಂತರ ಮಳೆಯಿಂದಾಗಿ ರೈತರ ಜಮೀನುಗಳು ಜವಳು ಹಿಡಿದ್ದು, ವಿವಿಧ ಬೆಳೆಗಳು ನಾಶವಾಗಿವೆ. ಸರ್ಕಾರ ರೈತರ ಬೆಳೆಹಾನಿ ನೀಡಬೇಕು. ಸತತ ಮಳೆಯಿಂದಾಗಿ ಜಮೀನಿನಲ್ಲಿ ಜವಳು ಹಿಡಿದಿರುವುದರಿಂದ ಬಿತ್ತನೆಗೆ ಅವಕಾಶವಿಲ್ಲದಂತಾಗಿದೆ ಎಂದು ತಿಳಿಸಿದರು. 

  ಬಿತ್ತನೆ ಮಾಡದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದ್ದು, ರೈತರು ಆತಂಕ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಈಗಾಲೆ ರೈತರು ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ. ಬೆಳೆಹಾನಿ ಹಾಗೂ ಜಮೀನು ಜವಳು ಹಿಡಿದಿರುವ ಕುರಿತಂತೆ ಅಧಿಕಾರಿಗಳು ಸರ್ಕಾರಕ್ಕೆ ಸೂಕ್ತ ವರದಿ ನೀಡದೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. 

  ತುಂಗಭದ್ರಾ ನದಿ ಪ್ರವಾಹಕ್ಕೆ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡು ರೈತರು ಬೆಳೆಹಾನಿ ಅನುಭವಿಸುತ್ತಿದ್ದಾರೆ. ಶಿರಹಟ್ಟಿ ಮತ್ತು ರೋಣ ಶಾಸಕರು ಅಧಿಕಾರಿಗಳೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರೀಶೀಲಿಸಿ ಪರಿಹಾರ ನೀಡಬೇಕು. ಇಲ್ಲವಾದರೆ ರೈತರೊಂದಿಗೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 

  ಚಿಕ್ಕವಡ್ಡಟ್ಟಿ ರೈತರಾದ ಸಿದ್ದಪ್ಪ ಗಡಗಿ, ಶಾಂತವೀರಯ್ಯ ಮಠದ, ಮೈಲಾರ​‍್ಪ ಕರಿ, ಮಹೇಶ ಗೌರಿ, ನಾಗನಗೌಡ ಪರಂಗಿ, ಈಶ್ವರಯ್ಯ ಹಳ್ಳಿಗುಡಿಮಠ, ರಾಮನಗೌಡ ಹಳೇಮನಿ, ಪ್ರಧಾನ ಕರಿ, ನಾಗನಗೌಡ ಕೆಂಚನಗೌಡ, ಬಸವನಗೌಡ ಗೌಡರ, ಮರಿತಿಮ್ಮಪ್ಪ ಸುಲ್ತಾನಪುರ, ದೇವಪ್ಪ ಕಂಬಳಿ, ದೇವಪ್ಪ ಹೊರಗಲಮನಿ ಇದ್ದರು. 


ಸುದ್ದಿ ಓದಿ