ರೈತರ ನೋವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ: ದೊಡ್ಡಯ್ಯ ಆರೋಪ
ಮುಂಡರಗಿ 13: ಇತ್ತಿಚೆಗೆ ನಿರಂತರ ಸುರಿದ ಮಳೆಯಿಂದಾಗಿ ಹಲವಾರು ರೈತರು ತಾವು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೊಳಗಾದ ಪರಿಸ್ಥಿತಿ ಉಂಟಾದರೂ ಸಹ ಸರ್ಕಾರ ಅವರಿಗೆ ಸೂಕ್ತವಾದ ಪರಿಹಾರ ಘೋಷಣೆ ಮಾಡದಿರುವುದಲ್ಲದೇ ಅವರ ನೋವಿಗೆ ಸ್ಪಂದಿಸದೆೇ ಇರುವುದು ಬೇಸರದ ಸಂಗತಿ ಎಂದು ರೋಣ ವಿಧಾನಸಭೆ ಮತಕ್ಷೇತ್ರದ ಎಎಪಿ ಪಕ್ಷದ ಆಕಾಂಕ್ಷಿ ಆನೇಕಲ್ ದೊಡ್ಡಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 2-3 ವರ್ಷಗಳಿಂದ ರೋಣ ಮತಕ್ಷೇತ್ರದ ಜನತೆಯೊಂದಿಗೆ ಸಂಪರ್ಕಹೊಂದಿ, ನಮ್ಮದೇಯಾದ ಸಂಘಟನೆಯನ್ನು ಮಾಡುತ್ತಾ ಈ ಕ್ಷೇತ್ರದಲ್ಲಿ ಕಂಡುಬರುವ ವಿವಿದ ಸಮಸ್ಯೆಗಳನ್ನು ನನ್ನ ಗಮನಕ್ಕೆ ಬಂದಿವೆ. ಹೀಗಾಗಿ ದೀನದಲಿತರು, ಬಡವರು ಹಾಗೂ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಆದರೆ ಇಲ್ಲಿಯ ಜವಾಬ್ದಾರಿಯುತ ಜನಪ್ರತಿನಿಧಿಗಳು ಅವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೇ ತಮ್ಮ ಸ್ವಹಿತಕ್ಕಾಗಿ ಮಾತ್ರ ಮೂಗಿಗೆ ತುಪ್ಪ ಸುರಿಯುವಂತ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ನಮ್ಮ ಆಮ್ ಆದ್ಮಿ ಪಕ್ಷ ಬಡವರ ಹಾಗೂ ರೈತರ ಪರವಾಗಿ ಅಭಿವೃದ್ಧಿಪರವಾದ ಕೆಲಸಗಳ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಾಧ್ಯಂತ 4 ವಿಧಾನ ಸಭೆ ಕ್ಷೇತ್ರಕ್ಕೂ ಪ್ರಭಲವಾದ ಅಭ್ಯರ್ಥಿಯನ್ನು ಕಣಕ್ಕೆ ನಿಲ್ಲಿಸಲಾಗುವುದು. ಗದಗ ಜಿಲ್ಲೆಯ ವಿವಿಧ ಗ್ರಾಮಗಳನ್ನು ಹಲವಾರು ರಸ್ಥೆಗಳು ಹಾಳಾಗಿವೆ. ಹಾಗೂ ಅನೇಕ ಮನೆಗಳು ಹಾನಿಯಾಗಿವೆ. ಇದನ್ನು ಕಂಡರೂ ಕುರುಡರಂತೆ ಇದ್ದಾರೆ. ಆದರೆ ಹಾನಿಯಾಗಿರುವುದು ನಮ್ಮ ರೈತರು ಹೀಗಾಗಿ ರಾಜ್ಯದಲ್ಲಿ ಎಲ್ಲಾ ರೈತರು ಜನಸಾಮಾನ್ಯರೂ ಬಸಲಾವಣೆಯ ಗಾಳಿಯನ್ನು ಬೀಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಪ್ರತಿಕ್ಷೇತ್ರದಲ್ಲಿಯೂ ಆಮ್ ಆದ್ಮಿ ಪಕ್ಷದ ಗೆಲ್ಲಿಸುವ ಗುರಿಯನ್ನು ಹೊಂದಲಾಗಿದೆ. ದೇಶದಲ್ಲಿ ಬ್ರಷ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಕಿತ್ತೊಗೆದು ಅರವಿಂದ ಕೇಜ್ರಿವಾಲರ ಸರ್ಕಾರವನ್ನು ರಚಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ರೂಪಿಸಲಾಗುವುದು.
ಇತ್ತಿಚೆಗೆ ತಮ್ಮ ಸೇವೆಗೆ ಹೋಗಿ ಮರಳಿ ತಮ್ಮ ಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಅತಿಯಾದ ಮಳೆಯಾಗಿದ್ದರಿಂದ ಇಬ್ಬರು ಪೋಲಿಸ್ ಪೇದೆಗಳು ಹಳ್ಳಕ್ಕೆ ಕೊಚ್ಚಿಹೋದ ಘಟನೆ ನಡೆದ ಸುದ್ದಿಕೇಳಿ ತುಂಬಾ ನೋವಾಯಿತು. ಜನರ ರಕ್ಷಣೆ ಮಾಡುವಂತ ಆರಕ್ಷರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಹೀಗಾಗಿ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವಾನ ಹೇಳಲು ಅವರ ಮನೆಗೆ ಬೇಟಿ ನೀಡಲು ಬಂದಿರುವೆ. ಮೃತರ ಕುಟುಂಬಕ್ಕೆ ಉತ್ತಮವಾದ ನೌಕರಿ ಕೊಡಿಸುವಂತೆ ಸಹಾಯವನ್ನು ಸರ್ಕಾರ ಮಾಡಬೇಕೆಉ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಎಎಪಿ ಜಿಲ್ಲಾಧ್ಯಕ್ಷ ಬಸವರಾಜ ದೇಸಾಯಿ, ವಿನೋದ ಜಾದವ, ಮಲ್ಲಿಕಾರ್ಜುನ ದೊಡ್ಡಮನಿ, ಮಲ್ಲನಗೌಡ ಹೊರಗಲಮನಿ, ಮೈಲಾರ್ಪ ಡಂಬಳ, ಸಿದ್ದಪ್ಪ ಹೊನ್ನಾಡಿ, ಅಶೋಕ ಉಳ್ಳಾಗಡ್ಡಿ, ಕಳಕನಗೌಡ ಗೌಡ್ರ, ಸಣ್ಣಖಾಜಾಸಾಬ ಕಲಕೇರಿ, ಗವಿಯಪ್ಪ ಮಠದ, ಶ್ರೀಕಾಂತ ಹೊನ್ನಪ್ಪನವರ, ರಾಮಣ್ಣ ಚೋಳಮ್ಮನವರ, ಯಲ್ಲಪ್ಪ ಉಪ್ಪಾರ, ರಮೇಶ ಶಿಗ್ಗಾವಿ, ಕಿರಣ ಬೇವಿನಮರದ, ಅಡಿವೆಪ್ಪ ಹೊಸಗೇರಿ, ಚಂದ್ರು ಬೆಟಗೇರಿ, ಅಲ್ಲಾಭಕ್ಷಿ ಸೊಟಕನಾಳ, ರಸೂಲ್ ಹಾರೋಗೆರಿ, ಮುತ್ತು ಚವಟಗೇರಿ, ಸಂತೋಷ ಅಬ್ಬಿಗೇರಿ ಇತರರು ಇದ್ದರು.