ಮುಂದಗೋಡ

ಬುಡಕಟ್ಟು ಜನಾಂಗದ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ: ಹೆಬ್ಬಾರ

ಬುಡಕಟ್ಟು ಜನಾಂಗದ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ: ಹೆಬ್ಬಾರ

ಲೋಕದರ್ಶನ ವರದಿ

ಮುಂಡಗೋಡ:ಸನಾತನ ಕಲೆ ಹಾಗೂ ಸಂಸ್ಕೃತಿ ಉಳಿಯಲು ಬುಡಕಟ್ಟು ಸಮುದಾಯಗಳ ಕಲಾಮೇಳಗಳು ನಿರಂತರವಾಗಿ ನಡೆಯುವುದು ಅವಶ್ಯವಾಗಿದೆ ಎಂದು ಕಾಮರ್ಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಲೊಯೋಲ ವಿಕಾಸ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ಜರುಗಿದ ತಾಲೂಕಾ ಬುಡಕಟ್ಟು ಮತ್ತು ಪರಿಶಿಷ್ಟ ತಳಸಮುದಾಯಗಳ ಸಾಂಸ್ಕೃತಿಕ ಕಲಾಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಬುಡಕಟ್ಟು ಜನಾಂಗದವರನ್ನು ಬಿಜೆಪಿ ಗುರುತಿಸಿ ಉನ್ನತ ರಾಷ್ಟ್ರಪತಿ ಹುದ್ದೆ ನೀಡಿದೆ. ಬುಡಕಟ್ಟು ಜನಾಂಗದ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ದೇಶದಲ್ಲಿ ನಿರುದ್ಯೋಗ ಬಡತನ ನಿವಾರಣೆಗೆ ವಿದ್ಯೆಯೇ ಮೂಲಮಂತ್ರವಾಗಿದ್ದು ತಾಯಂದಿರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ರಾಜಕೀಯ ವ್ಯಕ್ತಿಗಳು ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಬೇಕು. ಜಾತಿ ವಾಸನೆಯಿಂದ ಹೊರಬಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.  

ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮುಂದೆ ಬರುವಂತೆ ಮಾಡಬೇಕು. ಜೀವನದಲ್ಲಿ ಜಾತಿಗಿಂತ ಸಾಧನೆ ಮುಖ್ಯ. ಯಾರೂ ಇಂತಹ ಜಾತಿಯಲ್ಲಿ ಹುಟ್ಟಿ ಬರಬೇಕೆಂದು ಅರ್ಜಿ  ಹಾಕಿರುವುದಿಲ್ಲ. ಎಲ್ಲಿ ಹುಟ್ಟಿರುತ್ತೇವೊ ಆ ಜಾತಿಯ ಸಂಸ್ಕೃತಿಯಲ್ಲಿ ತಂದೆ-ತಾಯಿ ಆಶ್ರಯದಲ್ಲಿ ಬೆಳೆಯುತ್ತೇವೆ ಎಂದರು. ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇ ಶಕ ಎಲ್.ಟಿ.ಪಾಟೀಲ ಮಾತನಾಡಿದರು.

ಈ ವೇಳೆ ಜಿ.ಎಚ್.ಮರಿಯೋಜಿ ರಾವ್, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಸುಭಾಸ ಭೋವಿ, ದುರ್ಗಪ್ಪ ಬಂಡಿವಡ್ಡರ, ಫಾ.ಅನಿಲ ಡಿಸೋಜಾ, ಕರೀಮ್ಸಾಬ ಸಿದ್ದಿ, ರಾಮಣ್ಣ ಲಮಾಣಿ, ಹನುಮಂತ ಆರೆಗೊಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ