ಸರ್ಕಾರ ಕೋವಿಡ್ ಲಸಿಕೆ ಒದಗಿಸುವಲ್ಲಿ ವಿಫಲ: ಕಾಶಪ್ಪನವರ
ಹುನಗುಂದ 29: ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಸಮರ್ಪಕವಾದ ಕೋವಿಡ್ ಲಸಿಕೆಯನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
ನಗರದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಕೊರೊನಾ ಪುರಸಭೆಯ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಮತ್ತು ಓಷಧಿ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ದೇಶದ ಎಲ್ಲ ಜನರಿಗೆ ಸರಿಯಾಗಿ ಲಸಿಕೆಯನ್ನು ಪೂರೈಸಲು ಸಾಧ್ಯವಾಗದೇ 28 ದಿನಕ್ಕೆ ಪಡೆಯಬೇಕಾದ ಎರಡನೆಯ ಡೋಸ್ ಲಸಿಕೆಯ ಅವಧಿಯನ್ನು 84 ದಿನಗಳಿಗೆ ವಿಸ್ತರಿಸಿದ್ದಾರೆ. ಇದರಿಂದ ತಾಲೂಕಿನಲ್ಲಿ ಮೊದಲ ಡೋಸ್ ಲಸಿಕೆಯನ್ನು ಪಡೆಯಲು ನಿತ್ಯ ಪರದಾಡುವ ಸ್ಥಿತಿ ನೋಡಿದರೇ ಇದು ರಾಜ್ಯ ಸರ್ಕಾರ ವೈಫಲ್ಯವಾಗಿದೆ.
ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನಾಧ್ಯಂತ ಕೊವೀಡ್ ರೋಗಕ್ಕೆ ತುತ್ತಾಗಿ ಹೋಂ ಐಸೋಲೇಷನ್ದಲ್ಲಿರುವ ಸೋಂಕಿತರಿಗೆ ಓಷಧಿ ಕಿಟ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ರೋಗ ನಿಯಂತ್ರಣಕ್ಕೆ ಪಕ್ಷದ ವತಿಯಿಂದ ಗ್ರಾಮಕ್ಕೆ ಒಬ್ಬರಂತೆ ವಾರಿಯರ್ಸ್ಗಳನ್ನು ನೇಮಕ ಮಾಡಲಾಗಿದೆ. ಅವರು ಗ್ರಾಮದ ಮನೆ ಮನೆಗಳಿಗೆ ತೆರಳಿ ಜನರ ಆರೋಗ್ಯ ವಿಚಾರಿಸುವುದು ಹೋಂ ಐಸೋಲೇಷನ್ದಲ್ಲಿ ಇರುವರಿಗೆ ಓಷಧಿ ಕಿಟ್ ನೀಡುವುದರ ಜೊತೆ ಉಸಿರಾಟ ಸಮಸ್ಯೆ ಕಂಡು ಬಂದರೇ ಅಂತಹ ವ್ಯಕ್ತಿಗಳಿಗೆ ಐದು ಲೀಟರ್ ಆಕ್ಸಿಜನ್ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ, ಕೋವಿಡ್ನಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಅಂತಹ ವ್ಯಕ್ತಿಗಳ ಹೆಚ್ಚಿನ ಚಿಕಿತ್ಸೆಯ ಖರ್ಚುನ್ನು ಕೂಡಾ ಕಾಂಗ್ರೆಸ್ ಪಕ್ಷದ ಭರಿಸುತ್ತದೆ ಎಂದು ವಿಜಯಾನಂದ ಕಾಶಪ್ಪನವರ ತಿಳಿಸಿದರು. ಪುರಸಭೆಯ ಅಧ್ಯಕ್ಷ ಶರಣು ಬೆಲ್ಲದ, ಸದಸ್ಯ ಚಂದ್ರು ತಳವಾರ, ಬಸವರಾಜ ಗೊಣ್ಣಾಗರ, ಯಲ್ಲಪ್ಪ ನಡುವಿನಮನಿ, ಮಹಮ್ಮದ ದೋಟಿಹಾಳ, ಮೈನು ಧನ್ನೂರ ಮುಖಂಡರಾದ ರಾಜಕುಮಾರ ಬಾದವಾಡಗಿ, ಮಲ್ಲು ವೀರಾಪೂರ, ಶಿವಾನಂದ ಕಂಠಿ, ಮಲ್ಲಿಕಾರ್ಜುನ ಹೂಗಾರ, ದೇವು ಡಂಬಳ, ಮುತ್ತಣ್ಣ ಕಲಗೋಡಿ, ಸೋಮು ಜಮಾದಾರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.