ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಸರಕಾರ ಬದ್ಧ: ಸಚಿವ ಶ್ರೀರಾಮುಲು
ಬಳ್ಳಾರಿ 26: ರಾಜ್ಯ-ರಾಷ್ಟ್ರಕ್ಕೆ ಹೋರಾಡಿ, ಬಲಿದಾನಗೈದ ಪ್ರತಿಯೊಬ್ಬರ ಜೀವನವನ್ನು, ಅವರ ಆದರ್ಶಗಳನ್ನು, ತತ್ವ-ಸಿದ್ಧಾಂತಗಳನ್ನು, ತ್ಯಾಗ-ಬಲಿದಾನಗಳನ್ನು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡಲು ನಮ್ಮ ಸಕರ್ಾರ ಬದ್ಧವಾಗಿದೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ನಿಮಿತ್ತ ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಅಭಿಯಾನಕ್ಕೆ ಚಾಲನೆ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಮ್ಮ ಸಕರ್ಾರ ಅನಾಮಧೇಯ ಹೋರಾಟಗಾರರ ಪುಸ್ತಕವನ್ನು ಆಗಸ್ಟ್ 15 ರಂದು ಪ್ರಕಟಿಸಲಿದೆ ಎಂಬ ಘೋಷಣೆಯನ್ನೂ ಮಾಡಿದ್ದಾರೆ ಎಂದು ತಿಳಿಸಿದ ಅವರು ಹೀಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜ್ಯ ಹಾಗೂ ರಾಜ್ಯದ ಹೋರಾಟಗಾರರ ಕೊಡುಗೆಯನ್ನ ಸಂರಕ್ಷಿಸಿ, ಗೌರವಿಸಲು ನಮ್ಮ ಸಕರ್ಾರ ಬದ್ಧವಾಗಿದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆಯನ್ನು ಸ್ಮರಿಸುವ ಈ ವಿಶೇಷ ಅಭಿಯಾನ ಇಂದು ಬಳ್ಳಾರಿಯಲ್ಲಿ ಅತ್ಯಂತ ಸಡಗರ-ಸಂಭ್ರಮಗಳಿಂದ ಆಚರಿಸಲಾಗುತ್ತಿದೆ. ಈ ಅಭಿಯಾನದ ಭಾಗವಾಗಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಹಾಗೂ ಭಾರತರತ್ನ ಬಾಬು ರಾಜೇಂದ್ರ ಪ್ರಸಾದ್ ರವರ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ ಎಂದರು.
ಅಂದು ದೇಶಾದ್ಯಂತ ನಡೆದ ಹೋರಾಟ, ಚಳವಳಿ, ತ್ಯಾಗ, ಬಲಿದಾನ, ಅಸಹಕಾರ, ಸತ್ಯಾಗ್ರಹ , ವೀರ ಮರಣಗಳ ಫಲ ಇಂದಿನ ಈ ನಮ್ಮ ಸ್ವಾತಂತ್ರ್ಯ ಎಂದು ಬಣ್ಣಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಟೇಕೂರು ಸುಬ್ರಹ್ಮಣ್ಯ, ದೇವೇಂದ್ರಪ್ಪ, ರೇವಣಸಿದ್ದಯ್ಯ, ಲಕ್ಷ್ಮಿಬಾಯಿ, ಇಂದಿರಾಬಾಯಿ, ಸಾವಿತ್ರಿಬಾಯಿ, ಗೊಲರ್ಿ ಶರಣಪ್ಪ, ಬಣಕಾರ ಗೌಡಪ್ಪ, ಬಣಕಾರ ಸಿದ್ದಲಿಂಗಪ್ಪ, ಭದ್ರಶೆಟ್ಟಿ ಸಣ್ಣರುದ್ರಪ್ಪ.. ಹೀಗೆ ಭಾಗದ ನೂರಾರು ಹೋರಾಟಗಾರರು ಮುಂಚೂಣಿಯಲ್ಲಿದ್ದವರು ಹಾಗೂ ಜೈಲು ಪಾಲಾದವರು. ಟಿಬಿ ಜಯಲಕ್ಷ್ಮೀದೇವಿ, ಕೋಗಳಿ ರುದ್ರಮ್ಮ, ಡಾಕ್ಟರ್ ಲಕ್ಷ್ಮೀದೇವಿ, ಅಲ್ಲಂ ಸುಮಂಗಳಮ್ಮ ರಾಮ ಲಿಂಗಮ್ಮ ಚನ್ನಬಸಮ್ಮ ಹೀಗೆ ಹಲವು ಹೋರಾಟಗಾರರು ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿದರು.
ಮಹಾತ್ಮ ಗಾಂಧೀಜಿ , ಬಾಬು ರಾಜೇಂದ್ರ ಪ್ರಸಾದ್ , ಬಾಲಗಂಗಾಧರ್ ತಿಲಕ್ , ಜಯಪ್ರಕಾಶ್ ನಾರಾಯಣ್ , ರಾಜಗೋಪಾಲಾಚಾರಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತವನ್ನು ಮುನ್ನಡೆಸಿದ ಅನೇಕ ದಿಗ್ಗಜರ ಪಾದಸ್ಪರ್ಶದಿಂದ ಈ ನೆಲ ಹೋರಾಟದ ಬೀಡಾಗಿತ್ತು.ಗಾಂಧೀಜಿಯವರ ಪಾದಸ್ಪರ್ಶದ ಪರಿಣಾಮ ಈ ನೆಲ ಹೋರಾಟದ ಶಕ್ತಿಯಾಗಿ ತಿರುಗಿತ್ತು ಎಂದರು.
ವೀರ ಮುಂಡರಗಿಯ ಭೀಮರಾಯ, ಕೋಲಾಚಲಂ ವೆಂಕಟರಾವ್, ಎಮ್ಮಿಗನೂರಿನ ಸತ್ಯಾಗ್ರಹಿಗಳು ಕಥೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತುತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೆಂಡದ ಅಂಗಡಿಗಳ ತಡೆ ಮತ್ತು ಟೇಕೂರು ಸುಬ್ರಮಣ್ಯಂ ಹಾಗೂ ಅವರ ತಂಡದ ಹೋರಾಟವನ್ನು ಇದೇ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿಯೂ ಭಾರತ ಬಿಟ್ಟು ತೊಲಗಿ ಚಳವಳಿ ಜನಾಂದೋಲನವಾದ ಬಗೆಯನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಸಂಸದ ವೈ.ದೇವೇಂದ್ರಪ್ಪ,ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಜಿಪಂ ಸಿಇಒ ಜಿ.ಲಿಂಗಮೂತರ್ಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,ರಾಬಕೋವಿ ಹಾಲು ಒಕ್ಕೂಟದ ನಿದರ್ೇಶಕ ವೀರಶೇಖರರೆಡ್ಡಿ,ತಹಸೀಲ್ದಾರ್ ವಿಶ್ವನಾಥ, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕ್ರಮ ಸಂಯೋಜಕರಾದ ಕನರ್ಾಟಕ ನಾಟಕ ಅಕಾಡೆಮಿಯ ಸದಸ್ಯ ಪ್ರಭುದೇವ ಕಪ್ಪಗಲ್ಲು,ಸಾಮಾಜಿಕ ಕಾರ್ಯಕರ್ತ ಅಡವಿಸ್ವಾಮಿ, ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯು.ರಮೇಶ, ಕೃಷಿಕ ಆರ್.ಸೋಮಶೇಖರ್,ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿದರ್ೇಶಕ ರಾಜೇಶಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ಶಕ ಸಿದ್ದಲಿಂಗೇಶ ರಂಗಣ್ಣನವರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ವಿಶೇಷ ಸಾಕ್ಷ್ಯಚಿತ್ರವನ್ನು ಪ್ರದಶರ್ಿಸಲಾಯಿತು