ಜನಪದ ರಂಗಕಲೆ ಉಳಿಯಬೇಕಾದರೆ ಸರ್ಕಾರದ ಆರ್ಥಿಕ ನೆರವು ಮುಖ್ಯ: ಬಸವರಾಜ
ಬಳ್ಳಾರಿ.26: ಜನಪದ, ರಂಗಕಲೆ ಉಳಿಯಬೇಕಾದರೆ ಸರ್ಕಾರದ ಆರ್ಥಿಕ ನೆರವು ಮತ್ತು ಜನರ ಪ್ರೋತ್ಸಹದ ಒಲವು ಮುಖ್ಯ ಎಂದರು. ಹಾಗೆಯೇ ತೊಗಲುಗೊಂಬೆಯಾಟದ ಪರೆಂಪರೆ ಕುರಿತು ಉಪನ್ಯಾಸಕ ಎ.ಎಂ.ಪಿ ವೀರೇಶಸ್ವಾಮಿ ಇವರು ತಮ್ಮ ಉಪನ್ಯಾಸದಲ್ಲಿ ತೊಗಲುಗೊಂಬೆಯಾಟ ಪ್ರಾಚೀನ ಕಲೆಗಳಲ್ಲಿ ಒಂದಾಗಿದ್ದು, ಇದನ್ನು ಇಂದಿಗೂ ಬೆಳಗಲ್ ವೀರಣ್ಣ ಹಾಗೂ ಅವರ ಸೋದರ ಅಳಿಯ ಕೆ.ಹೊನ್ನೂರಸ್ಬಾಮಿ ಉಳಿಸಿ ಬೆಳೆಸಿಕೊಂಡು ಬಂದಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದು ಇತಿಹಾಸ ಆಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ.ಬಸವರಾಜ ಹೇಳಿದರು.
ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ ಬಳ್ಳಾರಿ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಜಾನಪದ ಸಂಜೆ ಕಾರ್ಯಕ್ರಮವನ್ನು ನಗರದ ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿಸಲಾಗಿತ್ತು.
ಯಡ್ರಾಮನಹಳ್ಳಿ ಭರಮಣ್ಣ. ಬೆಳಗಲ್ ವೀರಣ್ಣ ಇವರು ತೊಗಲುಗೊಂಬೆಯಾಟದ ಎಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗು ಲೇಖಕ ಡಾ. ದಸ್ತಗೀರ್ಸಾಬ್ ದಿನ್ನಿ, ಜಾನಪದ ಕಲಾವಿದರಾದ ಯಲ್ಲನಗೌಡ ಶಂಕರಬಂಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪುರಾತನ ಕಾಲದಿಂದಲೂ ತೊಗಲುಗೊಂಬೆ ಕಲೆ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ತುಂಬಾ ಸಂತಸದ ವಿಷಯ, ಈ ಹೆಮ್ಮೆಯು ಬಳ್ಳಾರಿ ಜಿಲ್ಲೆಯವರಿಗೆ ಮಾತ್ರ ಸಲ್ಲುತ್ತದೆ ಎಂದರು.
ಖ್ಯಾತ ನಿರೂಪಕ ವಿನೋದ್ ಎಂ ಚವ್ಹಾಣ್ ಇವರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಕೆ.ಹೊನ್ನೂರುಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಆದರ್ಶ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲಕ್ಷ್ಮಿದೇವಿ ವಂದಿಸಿದರು. ಕಾರ್ಯಕ್ರಮದ ನಂತರ ಉಮೇಶ್ ಮತ್ತು ತಂಡದವರಿಂದ ತೊಗಲುಗೊಂಬೆ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ದೊಡ್ಡ ಬಸವ ಗವಾಯಿಗಳು ವಚನ ಗಾಯನ ನಡೆಸಿದರು.