ಮುಂದಗೋಡ

ಅರಣ್ಯಭೂಮಿ ಹಕ್ಕು ನೀಡುವಲ್ಲಿ ಸರಕಾರ ವೈಫಲ್ಯ:ರವೀಂದ್ರ ನಾಯ್ಕ

ಅರಣ್ಯಭೂಮಿ ಹಕ್ಕು ನೀಡುವಲ್ಲಿ ಸರಕಾರ ವೈಫಲ್ಯ:ರವೀಂದ್ರ ನಾಯ್ಕ

ಲೋಕದರ್ಶನ ವರದಿ 

ಮುಂಡಗೋಡ:ಅರಣ್ಯಭೂಮಿ ಹಕ್ಕು ನೀಡುವಲ್ಲಿ ಸರಕಾರ ವೈಪಲ್ಯವಾಗುತ್ತಿದ್ದು ಭೂಮಿ ಹಕ್ಕಿಗಾಗಿ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಮಾಡುವುದು ಅನಿವಾರ್ಯವಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. 

ತಾಲೂಕಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು. ಅರಣ್ಯಭೂಮಿ ಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆಯನ್ನು ಪ್ರದರ್ಶಿಸಬೇಕು. ಜಿಲ್ಲೆಯ ಒಂದು ಮೂರರಷ್ಟು ಇರುವ ಅರಣ್ಯ ಅತಿಕ್ರಮಣದಾರರ ಕುಟುಂಬಗಳಿಗೆ ಭೂಮಿ ಹಕ್ಕು ನೀಡುವಲ್ಲಿ ಸರಕಾರ ವಿಫಲವಾದಲ್ಲಿ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು. 

ಶಬ್ಬೀರ್‌ಸಾಬ್ ಚಪಾತಿ, ಶೇಖಯ್ಯ ಹಿರೇಮಠ, ಅರ್ಜುನ ಚನ್ನಾಪುರ, ಮಲ್ಲಿಕಾರ್ಜುನ ಓಣಿಕೇರಿ, ಅಝಾದ್ ಅಬ್ದುಲ್‌ಸಾಬ್, ನಜೀರ್‌ಸಾಬ ಬೊಮ್ಮನಳ್ಳಿ, ವಿರಭದ್ರ​‍್ಪ ಹುನಗುಂದ ಮಾತನಾಡಿದರು. ತಾಲೂಕು ಅಧ್ಯಕ್ಷ ಶಿವಾನಂದ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರ​‍್ಪ ಗಳಗಿ, ನೀಸಾರ್‌ಅಹ್ಮದ್ ಹುಬ್ಬಳ್ಳಿ ನಾಗನೂರು, ಮಾರುತಿ ಗಣೇಶಪುರ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ