ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ
ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಫಿನಿಕ್ಸ್ ಶಾಲೆಯ ವಿದ್ಯಾರ್ಥಿಗಳು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿ ಕು. ಮಣಿಕಂಠ ಯಲಿಗಾರ (97.44) ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಸ್ಪೂರ್ತಿ ಭ್ರಹ್ಮಶೆಟ್ಟರ್ (96.48) ಪ್ರತಿಶತದೊಂದಿಗೆ ದ್ವಿತೀಯ ಸ್ಥಾನ ಮತ್ತು ಅನುಷಾ ಗಾಣಗೇರ (94.82) ಪ್ರತಿಶತದೊಂದಿಗೆ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಡಾ. ಎಂ ಎಂ ತಿರ್ಲಾಪೂರ, ಡಾ. ರಾಣಿ ಎಂ ತಿರ್ಲಾಪೂರ, ನರಹರಿ ಕಟ್ಟಿ ಸೇರಿದಂತೆ ಪ್ರಾಚಾರ್ಯ, ಶಿಕ್ಷಕರು ಹಾಗೂ ಸಿಬ್ಬಂಧಿ ವರ್ಗದವರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.

