ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ
ಲೋಕದರ್ಶನ ವರದಿ
ಶಿಗ್ಗಾವಿ : 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸವಣೂರ ತಾಲೂಕಿನ ಹಿರೇ ಮನ್ನಂಗಿ ಗ್ರಾಮದ ಜಿ.ಎನ್.ನಿಸ್ಸಿಮಗೌಡ್ರ ಸರಕಾರಿ ಪ್ರೌಡಶಾಲೆಯ ವಿಧ್ಯಾರ್ಥಿ ಪ್ರವೀಣ ಬಸನಗೌಡ ನೀರಲಗಿ 625 ಕ್ಕೆ 625 ಅಂಕಗಳನ್ನು ಗಳಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿ ಶಹರದ ವಿದ್ಯಾರ್ಥಿಗಳಿಗಿಂತ ಗ್ರಾಮದ ವಿದ್ಯಾರ್ಥಿಗಳು ಕಡಿಮೆ ಏನಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ಮುಖಂಡ ಯಾಸೀರಖಾನ ಪಠಾಣ ಹೇಳಿದರು.
ಸವಣೂರ ತಾಲೂಕಿನ ಮನ್ನಂಗಿ ವಿಧ್ಯಾರ್ಥಿಯ ಮನೆಗೆ ಹೋಗಿ ಅವರ ತಂದೆ ತಾಯಿ ನೇತೃತ್ವದಲ್ಲಿ ವಿದ್ಯಾರ್ಥಿಗೆ ಸನ್ಮಾನಿಸಿ ಅಭಿನಂದಿಸಿ ಸಿಹಿ ತಿನಿಸಿದರು. ಈ ಸಂದರ್ಭದಲ್ಲಿ ಎಂ.ಜೆ.ಮುಲ್ಲಾ, ಶಿವಾನಂದ ಬಾಗೂರ, ಅಬ್ದುಲಕರೀಂ ಮೊಗಲಲ್ಲಿ, ಸುಲೇಮಾನಖಾನ ಖಾಜೇಖಾನವರ, ಅತ್ತಾವುಲ್ಲಾಖಾನ ಖಾಜೇಖಾನವರ, ಶಹಬಾಜ ಕುಲಕರ್ಣಿ, ಸುಭಾಸ ಮಜ್ಜಗಿ, ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯಾಸೀರಖಾನ ಪಠಾಣ ಅಭಿಮಾನಿಗಳು ಉಪಸ್ಥಿತರಿದ್ದರು.