ವಿವಿಧ ಕಾರ್ಯಕ್ರಮ ಆಯೋಜನೆ ಒಳ್ಳೆಯ ಬೆಳವಣಿಗೆ: ಡಾ. ಕೆ. ಬಸಪ್ಪ
ಲೋಕದರ್ಶನ ವರದಿ
ಬಳ್ಳಾರಿ 12: ಶರನ್ನವರಾತ್ರಿ ಉತ್ಸವಗಳ ಪ್ರಯುಕ್ತ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನಾಟಕ, ಗೊರವರ ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಎಸ್.ಎಸ್.ಎ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಕೆ. ಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ನಗರದ ಬಂಡಿಹಟ್ಟಿಯ ಪ್ರದೇಶದ ಸಿದ್ಧರಾಮೇಶ್ವರ ಕಾಲೋನಿಯಲ್ಲಿ ಬನ್ನಿ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಪ್ರಥಮ ವರ್ಷದ ಶರನ್ನವರಾತ್ರಿ ಉತ್ಸವಗಳ ಐದನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಬಳ್ಳಾರಿ ಕೇಂದ್ರದ ನಿಲಯ ನಿರ್ದೇಶಕ ತಿಮ್ಮಪ್ಪ ಎಚ್ ಗೌಡ, ಕೆ ಶಿವಶರಣ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಮತ್ತು ಕಾರ್ಯನಿರ್ವಾಹಕ ವಿ ರಾಮಾಂಜಿನೇಯಲು ವಿ ಜಗನ್ನಾಥ ಅಂದ್ರಾಳು, ಕೆ.ಇ.ಬಿ ಗಂಗಣ್ಣ, ಕಟ್ಲೇರು ವೀರೇಶ್, ಶ್ರೀನಿವಾಸುಲು, ಕೆ ರಾಜಶೇಖರ್, ದೇವರಹಳ್ಳಿ ವಸಂತ, ಪೆನ್ನಮ್ಮನಹಳ್ಳಿ ವೆಂಕಟೇಶ್ ಈ ಜಿ.ರೆಡ್ಡಿ ಚರಕುಂಟೆ, ಮಹಾತ್ಮಗಾಂಧಿ ಶಾಲೆಯ ಶಿಕ್ಷಕರಾದ ಎಸ್ ನಾಗರಾಜ್, ಕೆ ಶೇಖರ್ಗೌಡ, ಜಿ ರವಿ ಮತ್ತು ಬಂಡಿಹಟ್ಟಿ ಗ್ರಾಮದ ನೂರಾರು ಭಕ್ತರು ಇದ್ದರು.
ಅಮಾತಿ ಬಸವರಾಜ ಮತ್ತು ತೊಲಮಾಮಿಡಿ ಚಿಕ್ಕಣ್ಣ, ಪೀರಾಸಾಬ್ ಮತ್ತು ಸಿದ್ದಮ್ಮನಹಳ್ಳಿ ವೀರೇಶ್ ಶ್ರೀದೇವಿ ಪುರಾಣ ಪ್ರವಚನ ಮಾಡಿದರು. ಗೊರವರ ಮಲ್ಲಯ್ಯ ಮತ್ತು ತಂಡ, ಬಳ್ಳಾರಿ ಇವರಿಂದ ಗೊರವರ ಕುಣಿತ ಪ್ರದರ್ಶನವನ್ನು ನಡೆಸಿಕೊಟ್ಟರು.