ಬಳ್ಳಾರಿ

ಒಳ್ಳೆತನಕ್ಕೆ ಯಾವಾಗಲೂ ಒಳ್ಳೆಯದೇ ಆಗುತ್ತದೆ :ಅಧ್ಯಕ್ಷ ಮಾರುತಿ

ಒಳ್ಳೆತನಕ್ಕೆ ಯಾವಾಗಲೂ ಒಳ್ಳೆಯದೇ ಆಗುತ್ತದೆ :ಅಧ್ಯಕ್ಷ ಮಾರುತಿ

ಲೋಕದರ್ಶನ ವರದಿ

ಬಳ್ಳಾರಿ26:  ಸಮಾಜದಲ್ಲಿ ಒಳ್ಳೆ ಕೆಲಸ ಮಾಡುತ್ತಾ ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಾ ಸಮಾನವಾಗಿ ಗೌರವ ಕೊಟ್ಟು ಒಳ್ಳೆತನದಿಂದ ನಡೆದುಕೊಂಡವರಿಗೆ ಸದಾ ದೇವರು ಒಳ್ಳೆಯದೇ ಮಾಡುತ್ತಾನೆ ಎಂದು ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಹೇಳಿದರು. 

    ಶನಿವಾರ ನಗರದ ಬೈಪಾಸ್ ರಸ್ತೆಯ ಅಲ್ಲಂ ಭವನದ ಹತ್ತಿರ ಎಸ್ ಆರ್. ಎಂ ಬಡಾವಣೆಯಲ್ಲಿ ಬೂಡಾವತಿಯಿಂದ ಸಿ.ಎ.ಸೈಟ್ (ನಾಗರೀಕ ಬಳಕೆಗಾಗಿ)ನ್ನು ಶಿರಡಿ ಸಾಯಿ ಸೇವಾ ಸಂಘ ಟ್ರಸ್ಟ್ಗೆ ಮಂಜೂರು ಮಾಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಟ್ರಸ್ಟ್ ಅದ್ಯಕ್ಷರಾದ ಆರ್ ಗೋಪಾಲಕೃಷ್ಣ ಅವರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ನಗರದ ಸುಮಾರು ಹತ್ತೊಂಬತ್ತು ಸಿ.ಎ ಸೈಟ್ ಗಳನ್ನು ಸಮಾಜ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ಮತ್ತು ಆಯಾ ಜಾತಿ ಸಮುದಾಯದವರಿಗೆ  ಮಂಜೂರು ಮಾಡಲು ನಮಗೆ ಕೂಡ ಸಂತೋಷವಾಗುತ್ತದೆ. ಇಲ್ಲಿಯವರೆಗೆ ಸಿ.ಎ ಸೈಟ್ ನ್ನು ಯಾವ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವುದಿಲ್ಲ ಎಂದು ಹೇಳಿದರು. 

    ಟ್ರಸ್ಟ್ನ ಅಧ್ಯಕ್ಷ ಆರ್ ಗೋಪಾಲಕೃಷ್ಣ ಮಾತನಾಡಿ, ದಿನನಿತ್ಯ ನಮ್ಮ ಟ್ರಸ್ಟ್ನಿಂದ ಜರುಗುವ ಸಾಮಾಜಿಕ ಕಾರ್ಯಕ್ರಮಗಳನ್ನು ನೋಡಿ ಮಾರುತಿ ಪ್ರಸಾದ್ ಸಂಘಕ್ಕೆ ಸಿ.ಎ ಸೈಟ್ ನೀಡಿದ್ದಾರೆ,  ನಾರಾಸೂರ್ಯನಾರಾಯಣರೆಡ್ಡಿ 5 ಲಕ್ಷ ರೂ.ಗಳನ್ನು ನಮ್ಮ ಟ್ರಸ್ಟ್ ಅಭಿವೃದ್ಧಿಗೆ ನೀಡಿದ್ದಾರೆ.  ಪಾಲಿಕೆ ಸದಸ್ಯ ಪ್ರಭಂಜನ್ ಅರವತ್ತು ಸಾವಿರ,  ಟ್ರಸ್ಟ್ನ ಸದಸ್ಯರು ರಮೇಶ್ ಒಂದು ಲಕ್ಷ ಹನ್ನೊಂದು ಸಾವಿರ, ಪಿ.ಎನ್ ರಾವ್ ಒಂದು ಲಕ್ಷ ಹನ್ನೊಂದು ಸಾವಿರ, ವೇಣು ಲಿಕ್ಕರ್ಸ್  ಒಂದು ಲಕ್ಷ ಹನ್ನೊಂದು ಸಾವಿರ  ದೇಣಿಗೆ ನೀಡಿದ ಹಣದಿಂದಲೇ ಈ ಸಿ.ಎ ಸೈಟ್ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.

  ಸುಮಾರು ಎರಡು ಕೋಟಿ ಐವತ್ತು ಲಕ್ಷದ 9041 ಚ.ಅ ನಿವೇಶನವನ್ನು ಹನ್ನೆರಡು ಲಕ್ಷ ಅರವತ್ತು ಸಾವಿರ ರೂಪಾಯಿಗಳಿಗೆ ಬೂಡಾದಿಂದ ನೀಡಿ  ಸಂಘ ಇನ್ನಷ್ಟು ಸಾಮಾಜಿಕ ಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದರು. ಸೈಟ್ ಕೊಳ್ಳಲು ಸಹಾಯ ಮಾಡಿರುವ ಎಲ್ಲರನ್ನು ಸನ್ಮಾನಿಸಲಾಯಿತು. ಟ್ರಸ್ಟ್ನಿಂದ ವಿವಿಧ ತರಬೇತಿ ಪಡೆದಿರುವ ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು.  ನಗರ ಪಾಲಿಕೆ ಸದಸ್ಯ ಪ್ರಭಂಜನ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಾ. ಡಿ.ಎಲ್ ರಮೇಶ್ ಗೋಪಾಲ್, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಜಯಪ್ರಕಾಶ್ ಜೆ ಗುಪ್ತ, ಆರ್.ಎಸ್.ಬಿ ಟ್ರಸ್ಟ್ ಅಧ್ಯಕ್ಷ ಪೋಲಾ ರಾಧಕೃಷ್ಣ, ಕಾರ್ಯದರ್ಶಿ, ಗುಡದೂರು ವಿಜಯ್ ಕುಮಾರ್, ನಗರೇಶ್ವರ ದೇವಸ್ಥಾನದ ನಾಮ ಸತ್ಯನಾರಾಯಣ, ಪಿ.ಎನ್.ರಾವ್,  ಟ್ರಸ್ಟ್ನ ಸದಸ್ಯರು,  ಶೀರಡಿ ಸಾಯಿ  ಸೇವಾ ಸತ್ಸಂಗ್ ಟ್ರಸ್ಟ್ ಅಧ್ಯಕ್ಷ ಆರ್ ಗೋಪಾಲಕೃಷ್ಣ ಸದಸ್ಯ, ಮುಖಂಡರು ಇತರರು ಭಾಗವಹಿಸಿದ್ದರು 

ಸುದ್ದಿ ಓದಿ