ವಾರ್ತಾ ಇಲಾಖೆ ಪ್ರಶಿಕ್ಷಣಾರ್ಥಿ ಮೈಲಾರಿಗೆ ಚಿನ್ನದಪದಕ
ಬಳ್ಳಾರಿ 06: ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರಶಿಕ್ಷಣಾರ್ಥಿಯಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಸಿಂಧುವಾಳ ಗ್ರಾಮದ ಮೈಲಾರಿ ಲಿಂಗಪ್ಪ ವೈ. ಎನ್ನುವ ವಿದ್ಯಾರ್ಥಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 14 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಎಂ.ಎಸ್.ಕಮ್ಯುನಿಕೇಷನ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‍ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಚಿನ್ನದ ಪದಕ ಪಡೆದರು.