ಮುಂಡರಗಿ

ಓಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕ

ಓಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕ

ಲೋಕದರ್ಶನ ವರದಿ 

ಮುಂಡರಗಿ 01:  ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಟ್ಟಣದ ಮೇಘಾ ಮುನವಳ್ಳಿಮಠ ಎಂಬ ಯುವತಿಯು ಓಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚಿನ ಪದಕಗಳನ್ನು ಪಡೆದು ತಾಲ್ಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. 

  ಆ.26ರಂದು ಜರುಗಿದ 23ವರ್ಷದೊಳಗಿನ ಮಹಿಳೆಯರ 400ಮೀಟರ್ ಓಟದ ಸ್ಪರ್ಧೆಯಲ್ಲಿ ಮೇಘಾ ಅವರು ಕೇವಲ 57.6ಸೆಕೆಂಡುಗಳಲ್ಲಿ ಗುರಿ ತಲುಪಿದ್ದಾರೆ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ. ಅದೇ ರೀತಿ ಆ.28ರಂದು ಜರುಗಿದ 400ಮೀಟರ್ ಓಟದಲ್ಲಿ 1.03ನಿಮಿಷದಲ್ಲಿ ಗುರಿ ತಲುಪಿ ತೃತಿಯ ಸ್ಥಾನ ಪಡೆದುಕೊಂಡು ಕಂಚಿನ ಪದಕ ಗೆದ್ದಿದ್ದಾರೆ. 

  ಬಾಲ್ಯದಿಂದಲೂ ಓಟ ಹಾಗೂ ಇನ್ನಿತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಮೇಘಾ ಅವರು ಸಧ್ಯ ಧಾರವಾಡದಲ್ಲಿ ಕ್ರೀಡಾ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೆ ಹಲವಾರು ರಾಜ್ಯ ಹಾಗೂ ಅಂತರ್ ರಾಜ್ಯ ಕ್ರೀಡೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಚಿನ್ನ ಗೆಲ್ಲುವ ಕನಸು ಕಾಣುತ್ತಿದ್ದಾರೆ. 

  ಮೇಘಾ ಅವರ ಪಾಲಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಹೀಗಾಗಿ ಕ್ರೀಡಾ ತರಬೇತಿ ಸೇರಬೇಕೆನ್ನುವ ಅವರ ಕನಸು ಕನಸಾಗಿಯೆ ಇತ್ತು. ಈ ಸಂದರ್ಭದಲ್ಲಿ ಪಟ್ಟಣದ ಗಣ್ಯ ವ್ಯಾಪಾರಿಗಳಾದ ಹೇಮಂತಗೌಡ ಪಾಟೀಲ ಹಾಗೂ ಅವರ ಪತ್ನಿ ವೀಣಾ ಅವರು ಕಳೆದ ಹಲವು ವರ್ಷಗಳಿಂದ ಮೇಘಾ ಅವರ ಕ್ರೀಡಾ ತರಬೇತಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. 


ಸುದ್ದಿ ಓದಿ