ಗಂಗಾ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ
ಲೋಕದರ್ಶನ ವರದಿ
ಕನಕಗಿರಿ 22: ಪಟ್ಟಣದ 14ನೇ ವಾರ್ಡಿನಲ್ಲಿರುವ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ 5ವರ್ಷದ ಪ್ರಯುಕ್ತ ಗಂಗಾ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗಿನ ಜಾವ ಗಂಗಾಪರಮೇಶ್ವರಿ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ ಫಲಪುಷ್ಪ ಅರೆ್ಣ, ಅಲಂಕಾರ ಮಾಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ದೇವಸ್ಥಾನದಿಂದ ಡೊಳ್ಳು, ಬಾಜಾ ಭಂಜತ್ರಿಯೊಂದಿಗೆ ಪ್ರಾರಂಭವಾದ ಭಾವ ಚಿತ್ರ ಮೆರವಣಿಗೆ ರಾಜ ಬೀದಿಯ ಮೂಲಕ ಮರಳಿ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಸುಮಂಗಲಿಯರು 108 ಕುಂಭ 51 ಕಳಸವನ್ನು ಹೊತ್ತು ಮೆರವಣಿಗೆಗೆ ಶೋಬೆ ತಂದರು. ಶಿವಶರಣ ಅಂಬಿಗರ ಚೌಡಯ್ಯ ಯುವಕ ಸಂಘ ಮತ್ತು ಗಂಗಾಪರಮೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಬಂದ ಭಕ್ತರಿಗೆ ಅನ್ನ ಸಂತರೆ್ಣ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಈ ಸಂದರ್ಭದಲ್ಲಿ ಹುಲುಗಪ್ಪ ವಾಲೆಕಾರ್, ದುರ್ಗೇಶ್ ವಾಲೆಕಾರ್, ರಾಮು ಕಂಪ್ಲಿ, ಶಿವಪ್ಪ ಕುಂಡೆರ್, ಟಿಜಿ ರಾಜಶೇಖರ, ಪರಸಪ್ಪ ಚಿಟಿಗಿ, ರಾಮಚಂದ್ರ ಟಿಜಿ, ಕನಕಪ್ಪ ,ಸಗರ್ಪ ಕಂಪ್ಲಿ,ಸೇರದಂತೆ ಸುತ್ತಮುತ್ತ ಗ್ರಾಮದಿಂದ ಗಂಗಾಮತಸ್ಥರು ಆಗಮಿಸಿದ್ದರು.