ಜಮಖಂಡಿ

ದೇವದಾಸಿ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ: ಟಿ.ವೆಂಕಟೇಶ

ದೇವದಾಸಿ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ: ಟಿ.ವೆಂಕಟೇಶ

ಲೋಕದರ್ಶನ ವರದಿ,

ಜಮಖಂಡಿ 18: ದೇವದಾಸಿ ಮಕ್ಕಳಿಗೆ ಉತ್ತಮ ಮಟ್ಟದಲ್ಲಿ ಶಿಕ್ಷಣ ಪಡೆಯುವ ಸೌಲಭ್ಯ ನೀಡಬೇಕಾಗಿದೆ. ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಶಿಕ್ಷಣ ನೀಡಿ, ಮಾಶಾಸನ ಹೆಚ್ಚಿಸಬೇಕು ಎಂದು ಬೆಂಗಳೂರು ಚಿಲ್ಟನ್ ಆಫ್ ಇಂಡಿಯಾ ಪೌಂಡೇಶನ್ ಸಂಚಾಲಕ ಟಿ.ವೆಂಕಟೇಶ ಹೇಳಿದರು.

ಇಲ್ಲಿನ ನಗರಸಭೆ ಸಭಾಭವನದಲ್ಲಿ ನಡೆದ ಚಿಲ್ಡ್ರನ್ ಆಫ್ ಇಂಡಿಯಾ ಪೌಂಡೇಶನ್ ಮತ್ತು ಚೈತನ್ಯ ಮಹಿಳಾ ಸಂಘ, ನ್ಯಾಯವಾದಿಗಳ ಸಂಘ ಹಾಗೂ ತಾಲೂಕಾ ಪತ್ರಕರ್ತರ ಬಳಗ ಸಹಯೋಗದಲ್ಲಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳ ಕುರಿತು ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ದೇವದಾಸಿ ಪದ್ದತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಎಲ್ಲ ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರ ಅತೀ ಅವಶ್ಯಕವಾಗಿದೆ. 2008 -09 ಸವರ್ೇ ಪ್ರಕಾರ ರಾಜ್ಯದಲ್ಲಿ 46,660 ದೇವದಾಸಿ ಹೆಣ್ಣು ಮಕ್ಕಳಿದ್ದ ಬಗ್ಗೆ ಸರ್ವೇ  ಮಾಡಲಾಗಿದೆ. ಆದರೆ ಇನ್ನೂ ಹೆಚ್ಚು ಸಂಖ್ಯೆಯಲ್ಲಿ 40 ವಯಸ್ಸು ಮೀರಿದ ದೇವದಾಸಿ ಹೆಣ್ಣುಮಕ್ಕಳು ಇದ್ದು, ರಾಜ್ಯ ಸಕರ್ಾರ ಮತ್ತೋಮ್ಮೆ ಸವರ್ೇ ಕಾರ್ಯ ನಡೆಸಬೇಕಾಗಿದೆಂದು ಎಂದರು.

ಅತಿಥಿಗಳಾದ್ದ ನ್ಯಾಯವಾದಿ ಆರ್.ಆರ್.ಕರೋಶಿ ಮಾತನಾಡಿ, ಅಂದು ದೇವರ ದಾಸಿಗಳಿದ್ದು, ಈಗ ಅವರನ್ನು ದೇವದಾಸಿ ಎಂದು ಕರೆಯುತ್ತಿದ್ದು, ದೇವಸಾಸಿಯರು ಶೇ.94 ರಷ್ಟು ಅವಿದ್ಯಾವಂತರಾಗಿದ್ದು, ಶೇ.97 ರಷ್ಟು ಕಾನೂನು ಬದ್ದವಾಗಿ ವಿವಾಹ ಆಗಿರುವುದಿಲ್ಲ. ದೇವದಾಸಿ ಹೆಣ್ಣುಮಕ್ಕಳಿಗೆ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವು ಬೇಕಾಗಿದೆ ಎಂದರು. 

ತಾಲೂಕಾ ಪತ್ರಕರ್ತರ ಬಳಗದ ಅಧ್ಯಕ್ಷ ಮಲ್ಲೇಶ ಆಳಗಿ ಮಾತನಾಡಿ, ದೇವದಾಸಿ ಮಕ್ಕಳಿಗೆ ಅವರ ತಂದೆ ಹೆಸರು ಕಾಲಂದಲ್ಲಿ ಯಾರ ಹೆಸರು ಭರ್ತೆ  ಮಾಡಬೇಕೆಂದು ಸಮಸ್ಯೆಯಿಂದಾಗಿ ಅನೇಕ ಮಕ್ಕಳು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ. ಸಕರ್ಾರ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆಂದರು. 

ನಗರಸಭೆ ಸದಸ್ಯ ಪರಮಾನಂದ ಗವರೋಜಿ, ಪತ್ರಕರ್ತ ಗುರುರಾಜ ವಾಳ್ವೇಕರ, ಆರೋಗ್ಯಾಧಿಕಾರಿ ಮುತ್ತು ಹೊನವಾಡ ಮಾತನಾಡಿದರು. ಮುಧೋಳದ ಚೈತನ್ಯ ಮಹಿಳಾ ಸಂಘದ ಅಧ್ಯಕ್ಷ ಮಧು ನಡುವಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಶುಅಭಿವೃದ್ಧಿ ಯೋಜನಾಧಿಕಾರಿ ಕೆ.ಜಿ.ಕೋರೆಗೋಳ, ಕಾಶಿನಾಥ, ಮುತ್ತು,  ಶಿವಾನಂದ ಹೂಗಾರ ಇದ್ದರು. ಕಾವೇರಿ ಮಾಂಗ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಲಕ್ಷ್ಮೀ ತೇಜಾ ಸ್ವಾಗತಿಸಿದರು. ಮಹಾಂತೇಶ ವಂದಿಸಿದರು.

 

ಸುದ್ದಿ ಓದಿ