ಜಿಪಂ,ತಾಪಂ ಚುನಾವಣೆಯಲ್ಲಿ ಗಾಣಿಗ ಸಮುದಾಯಕ್ಕೆ ಆಧ್ಯತೆ ನೀಡಿ: ಕಲ್ಲಿನಾಥ ಸ್ವಾಮಿ
ಹುನಗುಂದ21: ತಾಲೂಕಿನಾದ್ಯಾಂತ ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಗಾಣಿಗ ಸಮುದಾಯದ ಮುಖಂಡರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆಯನ್ನು ನೀಡುವಂತೆ ಕೋಲ್ಹಾರದ ಜಗದ್ಗುರು ಕಲ್ಲಿನಾಥ ಸ್ವಾಮಿಗಳು ಒತ್ತಾಯಿಸಿದರು.
ಪ್ರವಾಸಿ ಮಂದಿರಲ್ಲಿ ಗಾಣಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 30 ಸಾವಿರಕ್ಕೂ ಅಧಿಕ ಗಾಣಿಗ ಸಮುದಾಯದ ಜನರು ಇದ್ದು.ಗಾಣಿಗ ಸಮುದಾಯದ ಜನರು ಸಾಮಾಜಿಕ,ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದು. ಈ ಸಮುದಾಯದವರು ಗಾಣವನ್ನು ಮತ್ತು ಕೃಷಿಯನ್ನು ಅವಲಂಬಿತರಾಗಿ ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದು. ಈ ಸಮುದಾಯವನ್ನು ಮೇಲೆತ್ತಲು ಪಕ್ಷದ ವರಿಷ್ಠರು ಈ ಸಮುದಾಯ ಜನರಿಗೆ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಟಿಕೆಟ್ ನೀಡಿ ಹೆಚ್ಚಿನ ಆಧ್ಯತೆ ಕೊಡಬೇಕು.ಒಂದು ವೇಳೆ ಗಾಣಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದರೇ ಮುಂಬರುವ ತಾಪಂ, ಜಿ.ಪಂ ಸೇರಿದಂತೆ 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಗಾಣಿಗ ಸಮಾಜದ ತಾಲೂಕ ಅಧ್ಯಕ್ಷ ನಿಂಗಪ್ಪ ಅಮರಾವತಿ, ವೀರನಗೌಡ ಮೇಟಿ, ಅಯ್ಯನಗೌಡ ಲೆಕ್ಕಿಹಾಳ, ಬಸವರಾಜ ಇಸ್ಲಾಂಪುರ, ಬಸವರಾಜ ಹೊರಕೇರಿ, ಮುತ್ತಪ್ಪ ರೋಣದ, ಶ್ರೀನಿವಾಸ ಮೇಟಿ ಸೇರಿದಂತೆ ಅನೇಕರು ಇದ್ದರು.