ನನ್ನ ಸೇವೆಯನ್ನು ಪರಿಗಣಿಸಿ ನನಗೆ ಹೆಚ್ಚಿನ ಮತ ನೀಡಿ: ನಾಗರಾಜ್
ಬಳ್ಳಾರಿ 23: ನಾನು ಸತತ 20 ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತನಾಗಿ ದುಡಿದಿದ್ದೇನೆ, ಆದರೂ ನಾನು ಯಾವತ್ತು ನನಗೆ ಟಿಕೆಟ್ ಕೊಡಿ ಎಂದು ಕೇಳಿರಲಿಲ್ಲ. ನಾನು ಸಲ್ಲಿಸಿರುವ ಸೇವೆಗಳನ್ನು ಮನಗಂಡ ಬಿಜೆಪಿ ಪಕ್ಷದ ಮುಖಂಡರು ಈಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಸ ನೀಡಿದ್ದಾರೆ. ಕರೋನಾ ಸಮಯದಲ್ಲಿ ಸತತ 48 ದಿನಗಳ ಕಾಲ ಪ್ರತಿನಿತ್ಯ ಎರಡು ಸಾವಿರ ಜನರಿಗೆ ಉಚಿತವಾಗಿ ಮನೆಗೆ ಮನೆಗೆ ತೆರಳಿ ತರಕಾರಿ, ಊಟ, ಪಡಿತರ ಕಿಟ್ಗಳನ್ನು ವಿತರಣೆ ಮಾಡಿದ್ದೇನೆ ಎಂದು ಅಭ್ಯರ್ಥಿ ನಾಗರಾಜ್ ಅವರು ತಿಳಿಸಿದರು.ಇನ್ನು ಬಡಜನರಿಗೆ ಮದುವೆ ಸಮಯದಲ್ಲಿ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೆನೆ, ಇನ್ಮುಂದೆ ಕೂಡಾ ಜನರು ನನ್ನನ್ನು ಆರಿಸಿ ತರುತ್ತಾರೆ ಎನ್ನುವ ಭರವಸೆ ನನ್ನಲಿದೆ ಎಂದರು. 24*7 ಜನರಿಗೆ ಹತ್ತಿರದಲ್ಲಿದ್ದು ಜನರ ಸಮಸೆಗಳನ್ನು ಪರಹರಿಸಲು ನನ್ನ ಶಕ್ತಿಯನ್ನು ಮೀರಿ ಕೆಲಸ ಮಾಡುತ್ತೇನೆ ಎಂದು 30ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಿ.ನಾಗರಾಜ್ ತಿಳಿಸಿದರು. ಮಹಾನಗರ ಪಾಲಿಕೆಯ 30ನೇ ವಾರ್ಡ್ನಲ್ಲಿ 8791 ಮತಗಳು ಇವೆ.
ಮತಗಳ ಬೇರೇ ಬೇರೆ ವಾರ್ಡ್ಗಳಿಗೆ ವರ್ಗಾವಣೆ ಯಾಗಿದೆ. 4121 ಸಾಮಾನ್ಯ ಜನರ ,4681 ಅಲ್ಪ ಅಸಂಖ್ಯಾತ ಮತಗಳು ಇವೆ ಎಂದರು. ಜನರು ಮತಯಾಚನೆ ಸಮಯದಲ್ಲಿ ಮನೆಗಳ ವಿತರಣೆ, ಅಗತ್ಯ ಮೂಲ ಭೂತ ಸೌಲಭ್ಯ ಕೇಳಿಕೊಂಡಿದ್ದಾರೆ ಅದನ್ನು ಮಾಡಿಸಿಕೊಡುವೆ ಎಂದು ತಿಳಿಸಿದರು. ಜನರ ಸೇವೆ ಮಾಡಲು ಬಹಳ ಇμÀ್ಟ ಇದೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಿಸುವೆ ಎಂದು ತಿಳಿಸಿದರು. ಬಿಜೆಪಿಯ ಹಿರಿಯ, ರಾಜಕೀಯ ವ್ಯಕ್ತಿಗಳ ಸಲಹೆ, ಸೂಚನೆ ಮೇಲೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದೆನೆ ಎಂದು ತಿಳಿಸಿದರು. ಜನರು ನನ್ನ ಸೇವೆಯನ್ನು ಗುರುತಿಸಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ಜನರಲ್ಲಿ ಮತಯಾಚಿಸಿದರು. ಈ ಸಂಧರ್ಭದಲ್ಲಿ ಪಕ್ಷ ಮುಖಂಡರು, ಬಂಡೆಟ್ಟಿ ಮಹೇಶ್, ಶ್ಯಾಮ್, ಭಾರ್ಗವ್, ರಾಮಕ್ರಿಷ್ಣ, ವೆಂಕಟೇಶ್, ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.