ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಿ: ಡಾ.ಲಕ್ಷ್ಮಣ ನಾಯ್ಕ
ಶಿಗ್ಗಾವಿ 29: ಆರೋಗ್ಯಕರ ವಾತಾವರಣ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಆದ್ದರಿಂದ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಮಣ ನಾಯ್ಕ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ ಅಡಿಯಲ್ಲಿ ಅಕ್ಟೋಬರ್ 2 ರ ಮಹಾತ್ಮ ಗಾಂಧೀಜಿಯವರ ಜಯಂತಿವರೆಗೆ ಇಡೀ ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ ಅದರ ನಿಮಿತ್ಯ ನಾವು ಸಹಿತ ಗಾಂಧೀಜಿ ಜಯಂತಿವರೆಗೆ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದರು.
ತಜ್ಞ ವೈದ್ಯ ಡಾ.ವಿವೇಕ ಮಾತನಾಡಿ ನಾವು ಸ್ವಚ್ಛ ಮಾಡುವುದರ ಮೂಲಕ ಸಾರ್ವಜನಿಕರಿಗೂ ಸಹಿತ ನೀವು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಚಗೋಳಿಸಲು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ತಜ್ಞ ವೈದ್ಯೆ ಡಾ.ರಾಜೇಶ್ವರಿ ಮಾತನಾಡಿ ಜನರಿಗೆ ಆರೋಗ್ಯದ ಜೊತೆಗೆ ಸ್ವಚ್ಚತೆ ಬಗ್ಗೆ ಮಾಹಿತಿಯನ್ನು ನೀಡಿ ಪಟ್ಟಣದ ಪರಿಸರವನ್ನು ಶುದ್ದಗೋಳಿಸುವುದು ಸ್ವಚ್ಚತೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ದಂತ ವೈದ್ಯೆ ಡಾ. ವಿದ್ಯಾ ಬ್ಯಾಟಪ್ಪನವರ, ಶುಶ್ರೂಷಾ ಅದೀಕ್ಷಕಿ ಆರ್.ಸಾರಮ್ಮ, ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.