ಕಸಾಪ ವಿನೋದ ಕರಣಂಗೆ ಅವಕಾಶ ಕೊಡಿ: ಗಂಗಾಧರಯ್ಯ
ಬಳ್ಳಾರಿ 26: ರಾಜ್ಯದಲ್ಲಾಗಲೀ ಅಥವಾ ಜಿಲ್ಲೆಗಳಲ್ಲಾಗಲೀ ಸಾಹಿತ್ಯ ಪರಿಷತ್ತಿನ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧಿಸುವುದು ತೀರಾ ಅಪರೂಪದಲ್ಲಿ ಅಪರೂಪ.. ಜೊತೆಗೆ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲೂ ಮಹಿಳೆಯರು ತುಂಬಾ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂಥಾ ವಾತಾವರಣದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಿನೋದಾ ಕರಣಂ ಎಂಬ ಮಹಿಳೆ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಕಸಾಪದ ಚುನಾವಣಾ ಕಣಕ್ಕೆ ಇಳಿಯಲು ನಿರ್ಧರಿಸಿರುವುದು ಹೆಮ್ಮೆಯ ವಿಷಯ ಎಂದು ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಸಿ.ಎಂ. ಗಂಗಾಧರಯ್ಯನವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಅವರು ಅಖಂಡ ಬಳ್ಳಾರಿಯ ಕೊಂಡಿಯಂತೆ ಕೆಲಸ ಮಾಡುತ್ತಾರೆಂಬುದರ ಬಗ್ಗೆ ಯಾವ ಅನುಮಾನವೂ ಇಲ್ಲ. ಇವರು ಬಳ್ಳಾರಿಗೆ ಅಖಿಲಭಾರತ ಸಾಹಿತ್ಯ ಸಮ್ಮೇಳನ ತರುವ ಯೋಚನೆ ಹೊಂದಿದ್ದಾರೆ ಜೊತೆಗೆ ಉತ್ತಮ ಕೆಲಸಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಶ್ರಮಿಸುತ್ತಾರೆಂಬ ಭರವಸೆಯನ್ನು ಮೂಡಿಸಿದ್ದಾರೆ.
ಆದ್ದರಿಂದ ಎಲ್ಲಾ ಸದಸ್ಯರು ಅರ್ಹ ಮಹಿಳೆಯನ್ನು ಬೆಂಬಲಿಸುವುದರ ಮೂಲಕ ಸಾಹಿತ್ಯ ಲೋಕದಲ್ಲಿ ಲಿಂಗ ತಾರತಮ್ಯ ನಿವಾರಿಸಿ ಬಳ್ಳಾರಿ ಕಸಾಪದಲ್ಲಿ ಹೊಸ ಅಧ್ಯಾಯ ಬರೆಯಬೇಕೆಂದು ಸಿ.ಎಂ. ಗಂಗಾಧರಯ್ಯ ವಿನಂತಿಸಿಕೊಂಡಿದ್ದಾರೆ.