ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿ : ಸಿದ್ದನಗೌಡ ರೆಡ್ಡಿ ಅಸಮಾಧಾನ
ಕೊಲ್ಹಾರ 05: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವುಕುಮಾರ ಅವರು ಜು3 ರಂದು ಪ್ರಮಾಣ ವಚನದಲ್ಲಿ ಕೆಲ ಸಚಿವರು ಸ್ವೀಕಾರ ಮಾಡಿದ್ದರು. ಕೇವಲ 42 ಗಂಟೆಯಲ್ಲಿ ಹಿರಿಯರಾದ ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿ ಅನಾಯ್ಯ ಮಾಡಿದ್ದು ಸರಿಯಲ್ಲ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿದ್ದರು ಅದರಂತೆ ಸಿಎಂ ಡಿ.ಕೆ.ಶಿವುಕುಮಾರ ಅವರು ಕೊಟ್ಟ ಮಾತು ತಪ್ಪಿದ್ದಾರೆ ಅದಕ್ಕಾಗಿ ಬಯಸಿದ ಖಾತೆ ಸಿಗದಿರುವುದಕ್ಕೆ ಅಸಮಾಧಾನದಿಂದ ರಾಜಿನಾಮೆ ನೀಡಿದ್ದಾರೆ. ಈ ಕೂಡಲೇ ಹೈಕಮಾಂಡ್ ಮಧ್ಯೆ ಪ್ರವೇಶಿಸಿ 1973 ರಿಂದ ಕಾಂಗ್ರೆಸ ಪಕ್ಷದಲ್ಲಿ ಶಾಸಕರಾಗಿ ಸಚಿವರಾಗಿ ನಿಷ್ಠಾವಂತರಾಗಿ ದುಡಿದಿದ್ದಾರೆ. ಈ ಕೂಡಲೇ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಪಕ್ಷಕ್ಕೆ ಅವರ ಸೇವೆ ಅಗತ್ಯವಾಗಿದೆ. ಒಂದು ವೇಳೆ ಅವರಿಗೆ ಗೌರವ ಕೊಟ್ಟು ಮಾನ್ಯತೆ ಕೈಗೊಳ್ಳದಿದ್ದಲ್ಲಿ ಮುಂಬರುವ ಬೆಂಗಳೂರು ಸ್ಥಳೀಯ ಹಾಗೂ 2028 ರಲ್ಲಿ ಚುನಾವಣೆಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಹಾಗೂ ವಿಜಯಪೂರ ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿದ್ದನಗೌಡ ರೆಡ್ಡಿಯವರು ತಾಲೂಕಿನ ತೆಲಗಿ ಗ್ರಾಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.