ಹೆಣ್ಣು ಮಕ್ಕಳ ದಿನಾಚರಣೆ
ಬಳ್ಳಾರಿ 21: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಳ್ಳಾರಿ ವತಿಯಿಂದ ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಮದ ಪ್ರೌಢಶಾಲೆಯಲ್ಲಿ ಜ.24ರಂದು ಹತ್ತೊಂಬತ್ತು ವರ್ಷದ ಒಳಗಿನ ಯುವತಿಯರ ಹೆಣ್ಣು ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಬಿಎಚ್ಎಂ ವಿರುಪಾಕ್ಷಯ್ಯಸ್ವಾಮಿ ತಿಳಿಸಿದ್ದಾರೆ.
ಸಂಜೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಬಿ.ಎಚ್.ಎಂ ವಿರುಗಪಾಕ್ಷಯ್ಯ, ಭಾಷಾ, ಜಿಲ್ಲಾ ಯುವ ಸಮಿತಿ ಅಧ್ಯಕ್ಷ ಪ್ರಶಾಂತ್ ಜಿ.ಎಚ್. ಉಪಾಧ್ಯಕ್ಷರಾದ ಎಂ. ರಕ್ಷಿತಾ, ಸದಸ್ಯರಾದ ತಿಪ್ಪೇಸ್ವಾಮಿನಾಯ್ಕ್, ಸಲಹೆಗಾರರಾದ ಇಬ್ಬನಿ ವಿ.ಬಿ. ಮಲ್ಲಪ್ಪ, ಜಗನ್ನಾಥ್ ಅಂದ್ರಾಳ್, ಈ.ಜಿ. ರೆಡ್ಡಿ ಚರಕುಂಟೆ ಸೇರಿದಂತೆ ಸಂಸ್ಥೆಯ ಹಲವಾರು ರೇಂಜರ್ಸ್ ಮತ್ತು ರೋವರ್ಗಳು ಉಪಸ್ಥಿತರಿದ್ದರು.