ಬಳ್ಳಾರಿ

ಕಥೆ ರಂಗರೂಪಕ್ಕೆ ತರುವುದು ಸವಾಲಿನ ಕೆಲಸ: ಗುರುಸಿದ್ದಸ್ವಾಮಿ

ಕಥೆ ರಂಗರೂಪಕ್ಕೆ ತರುವುದು ಸವಾಲಿನ ಕೆಲಸ: ಗುರುಸಿದ್ದಸ್ವಾಮಿ

ಬಳ್ಳಾರಿ 06: ಒಂದು ಕಥೆಯನ್ನು ರಂಗರೂಪಕ್ಕೆ ತರುವುದು ಸವಾಲಿನ ಕೆಲಸ. ಕಥೆಯ ಸ್ವರೂಪಕ್ಕೆ ಯಾವುದೇ ದಕ್ಕೆ ಬರದಂತೆ ‘ಮೊಹರಂ ಕಡೇ ದಿನ’ ನಾಟಕ ಮೂಡಿಬಂದಿದೆ. ಈ ಕೃತಿಯು ಸಮಾಜದಲ್ಲಿ ನಡೆಯುವ ಸಂಘರ್ಷವನ್ನು ಪ್ರತಿಬಿಂಬಿಸಿರುವುದು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ ಅವರು ನುಡಿದರು.  

ಅವರು ಸ್ಥಳೀಯ ಡಾ.ರಾಜಕುಮಾರ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯೋಗಿನಿ ಪ್ರಕಾಶನ, ಸಿರುಗುಪ್ಪ ಇವರ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಿದ್ದ “ಮೊಹರಂ ಕಡೇ ದಿನ” ಎಂಬ ನಾಟಕದ ಕೃತಿಯ ಬಿಡುಗಡೆ ಸಮಾರಂಭವನ್ನು ಹಲಗೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.  

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ. ನಮ್ಮ ಭಾಷೆಯ ಮೇಲೆ ಗೌರವ ಪ್ರೀತಿ ಇದ್ದಾಗ ಮಾತ್ರ ಸಾಹಿತ್ಯವನ್ನು ಕೂಡ ನಾವು ಬೆಳೆಸಬಹುದಾಗಿದೆ. ಸೃಜನಶೀಲ ಕೃತಿಗಳಿಂದ ಸಾವಿರಾರು ವರ್ಷಗಳ ನಮ್ಮ ಕನ್ನಡ ಸಾಹಿತ್ಯ ಸಮೃದ್ಧವಾಗಿದೆ ಎಂದರು.  

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಶಶಿಕಾಂತ ಎಸ್‌.ಉಡಿಕೇರಿ ಅವರು, ಸಿದ್ದರಾಮಕಲ್ಮಠ ಅವರ ‘ಉರಿಯ ಬೆಳಕು’ ಸಣ್ಣಕಥೆ ಆಧಾರಿತವಾಗಿದ್ದು, ಇದನ್ನು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ನಾಟಕ ರೂಪಾಂತ ಮಾಡಿದ್ದಾರೆ. ಇದು ನಮ್ಮ ಬದುಕಿನ ಸಾಮರಸ್ಯ ಮತ್ತು ಸಂಘರ್ಷದ ಕಥೆಯಾಗಿದೆ. ನಾಟಕವನ್ನು ಓದುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಆಚರಿಸುತ್ತಿರುವ ಮೊಹರಂ ಹಬ್ಬದ ಅಲಾಯಿ ಕುಣಿತದಲ್ಲಿ ಎಲ್ಲರೂ ಒಂದಾಗುವ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ರಂಗರೂಪದಲ್ಲಿ ಅತ್ಯಂತ ಉತ್ತಮವಾಗಿ ತಂದಿದ್ದಾರೆ. ಈ ಕೃತಿಯು ದಮನಿತರ ಬದುಕಿನ ಸಂಘರ್ಷದ ಚಿತ್ರಣವನ್ನು ದಟ್ಟವಾಗಿ ಕಟ್ಟಿಕೊಡುತ್ತದೆ ಎಂದರು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ್, ನಾಟಕ ಅಕಾಡೆಮಿಯ ಸದಸ್ಯ ಪ್ರಭುದೇವ ಕಪ್ಪಗಲ್ ಮಾತನಾಡಿದರು.  

ರಂಗನಿರ್ದೇಶಕರಾದ ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗಕೃತಿಕಾರ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರ​‍್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಸುಂಕಪ್ಪ, ಮಂಜುನಾಥ ಜೋಳದರಾಶಿ, ಸಿದ್ಮಲ್ ಮಂಜುನಾಥ, ಡಾ.ಕೆ.ಬಸಪ್ಪ, ಕೆ.ರಮೇಶ್, ಡಿ.ಮಹೇಶ್, ಶಿವಾನಂದ ಕತಕನಹಳ್ಳಿ, ವಿಭೂತಿ ಎರಿ​‍್ರಸ್ವಾಮಿ, ಸಿ.ಎಂ.ಮಂಜುನಾಥ, ಕೆ.ಜಗದೀಶ್, ನಿವೃತ್ತ ಪಿಎಸ್‌ಐ ಹುಸೇನ್‌ಸಾಬ್ ಮುಂತಾದವರು ಹಾಜರಿದ್ದರು. ಆರಂಭದಲ್ಲಿ  ಹುಲುಗಪ್ಪ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಸ್ವಾಗತಿಸಿದರು. ಯೋಗಿನಿ ಪ್ರಕಾಶನದ ಪ್ರಕಾಶಕ ಪಿ.ದಿವಾಕರ ನಾರಾಯಣ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ಕರಡಕಲ್ ವೀರೇಶ್ ವಂದಿಸಿದರು. 


ಸುದ್ದಿ ಓದಿ