ಸರ್ವ ಸದಸ್ಯರ ಸಾಮಾನ್ಯ ಸಭೆ
ಲೋಕದರ್ಶನ ವರದಿ
ಸಿರುಗುಪ್ಪ 25: ತಾಲ್ಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಎಂ. ಕೆ ರುದ್ರಮ್ಮ ಕೊಮಾರೆಪ್ಪ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಜರುಗಿತು.
ಶಾಸಕ ಸೋಮಲಿಂಗಪ್ಪ ಮಾತನಾಡಿ ಪಟ್ಟಣ ಅಭಿವೃದ್ಧಿ ಹೊಂದಬೇಕಾದರೆ ಒಗ್ಗಟ್ಟಿನಿಂದ ಅಧ್ಯಕ್ಷರು ಸದಸ್ಯರು ಉಪಾಧ್ಯಕ್ಷ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ಕೆಲಸ ನಿರ್ವಹಿಸಬೇಕು. ಸರಕಾರದ ಅನುದಾನದ ಜತೆಗೆ ತೆರಿಗೆ ಹಣವು ಅಭಿವೃದ್ಧಿಗೆ ಮುಖ್ಯ ತೆರಿಗೆ ಸಂಗ್ರಹವು ಸರಿಯಾಗಿ ಆಗುತ್ತಿಲ್ಲ ಆದ್ದರಿಂದ ತೆರಿಗೆ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯರಿಗಾಗಿ 450ಮನೆಗಳಿಗೆ ಅನುಮೋದನೆ ದೊರಕಿದೆ ಅರ್ಹ ಫಲಾನುಭವಿಗಳ ಪಟ್ಟಿ ಇದೆ ಅದರ ಆಧಾರದ ಮೇಲೆ ಅಧಿಕಾರಿಗಳು ಫೆಬ್ರವರಿ 28ರ ಒಳಗೆ ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅನುಮತಿ ಪತ್ರ ನೀಡಬೇಕು ಎಂದರು ಉಪಾಧ್ಯಕ್ಷೆ ಎಂ ದೊಡ್ಡ ರುದ್ರಮ್ಮ ಫಕ್ಕೀರಯ್ಯ ಮುಖ್ಯಾಧಿಕಾರಿ ಈರಣ್ಣ, ಸದಸ್ಯ ರಾಘವೇಂದ್ರ, ದ್ಯಾವಣ್ಣ ಬಿಜೆಪಿ ಸದಸ್ಯರು ಇದ್ದರು ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು.