ಲಿಂಗತ್ವಾಧಾರಿತ ದೌರ್ಜನ್ಯ ವಿಮೋಚನ ಅಭಿಯಾನ ಜಾಥಾ
ಮುಂಡಗೋಡ:ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಲಿಂಗತ್ವಾಧಾರಿತ ಮಹಿಳಾ ದೌರ್ಜನ್ಯ ವಿಮೋಚನ ಅಂಗವಾಗಿ ಸಹಿಸೆವು ನಾವು ಧ್ವನಿ ಎತ್ತುವೆವು ಎಂಬ ಘೋಷ ವಾಕ್ಯದೊಂದಿಗೆ ಜಾಥಾ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಲಿಂಗ ಸಂವೇದನೆ ಪ್ರತಿಜ್ಞೆ ಮಾಡಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ದ್ಯಾಮಕ್ಕ ಹೊತಗಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಅಣ್ಣಪ್ಪ ವಡ್ಡರ, ಪಿಎಸ್ಐ ಎನ್.ಡಿ.ಜಕ್ಕಣ್ಣನವರ, ಎ.ಎಸ್.ಐ. ಗೀತಾ ಕಲಘಟಗಿ, ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಹರಿಯಾಳ, ವಲಯ ಮೇಲ್ವಿಚಾರಕಿ ಶ್ಯಾಮಲಾ ನಾಯ್ಕ, ಸಿ.ಡಿ.ಪಿ.ಒ ಇಲಾಖೆಯ ಗೀತಾ, ಆರೋಗ್ಯ ಇಲಾಖೆಯ ಶಾಂತಯ್ಯ, ಶಿಕ್ಷಣ ಇಲಾಖೆಯ ಪುಟ್ಟಣ್ಣ, ಗ್ರಾ.ಪಂ.ಸದಸ್ಯರಾದ ಶೋಭಾ, ಕಾಳಮ್ಮ, ಫಕ್ಕೀರಮ್ಮ, ಸಿಬ್ಬಂದಿ ಮಾನಸ, ಬಸವರಾಜ, ಎಂ.ಬಿ.ಕೆ. ರೇಖಾ, ಎಲ್ಸಿಆರ್ಪಿ ಸುಜಾತ, ಶ್ವೇತಾ, ಸಖಿಯರಾದ ವಿಜಯಲಕ್ಷ್ಮೀ, ಚಂದ್ರಕಲಾ, ಅಂಗನವಾಡಿ ಕಾರ್ಯಕರ್ತೆಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.