ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೇಟ್ ಕೊಡಿ
ತಾಳಿಕೋಟಿ: ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಲ್ಲಿರುವ ಎಲ್ಲ ಕ್ಷೇತ್ರಗಳಿಗೂ ಜೆಡಿಎಸ್ ಪಕ್ಷದಿಂದ ಹಾಕುವ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಕಾರ್ಯಕರ್ತರಿದ ಸಂಗ್ರಹಿಸಿದ ನಂತರವೆ ಟಿಕೆಟ್ಗಳನ್ನು ನೀಡಬೇಕೆಂದು ಜೆಡಿಎಸ್ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಕಾರ್ಯಾಧ್ಯಕ್ಷ ಜಾಕೀರಹುಸೇನ ಲಾಹೋರಿ ಪಕ್ಷದ ವರಿಷ್ಠರಲ್ಲಿ ವಿನಂತಿಸಿಕೊಂಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿರುವ ಕಾರ್ಯಕರ್ತರಿಗೆ ಅಭ್ಯರ್ಥಿಯ ಕುರಿತು ಮಾಹಿತಿಯಿಲ್ಲದೆ ಹೋದಲ್ಲಿ ಅಂಥವರ ಆಯ್ಕೆಗಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಅವಕಾಶಗಳಿವೆ ಅದನ್ನು ಯಾವ ಕಾರಣಕ್ಕೂ ಕಳೆದುಕೊಳ್ಳುವಂತಾಗಬಾರದು.ಇದು ಸೂಕ್ತವಾದ ಅಭ್ಯರ್ಥಿಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.
ಅಭಿನಂದನೆ: ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಬಂದರೆ ಮುಸ್ಲಿಂ ಮುಖ್ಯಮಂತ್ರಿ, ದಲಿತ ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಘೋಷಿಸಿದ ವರಿಷ್ಠರ ತೀರ್ಮಾನ ಅಭಿನಂದನಾರ್ಹವಾಗಿದೆ. ಇದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದ ಅವರು ಇದು ಚುನಾವಣಾ ವರ್ಷವಾಗಿದೆ ನಮ್ಮ ಕಾರ್ಯಕರ್ತರು ಕ್ರೀಯಾಶೀಲರಾಗಬೇಕು ಎಂದು ತಿಳಿಸಿದರು.