ಮುಂದಗೋಡ

ಗಾರ್ಮೆಂಟ್ಸ್‌ ಕಾರ್ಮಿಕರ ವೇತನ ಬಾಕಿ ಇಟ್ಟುಕೊಂಡಿಲ್ಲ: ಕಟ್ಟಿಮನಿ

ಗಾರ್ಮೆಂಟ್ಸ್‌ ಕಾರ್ಮಿಕರ ವೇತನ ಬಾಕಿ ಇಟ್ಟುಕೊಂಡಿಲ್ಲ: ಕಟ್ಟಿಮನಿ

ಮುಂಡಗೋಡ:ನಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಿದ್ದೇನೆ ಬಾಕಿ ಇಟ್ಟುಕೊಂಡಿಲ್ಲ. ಕೆಲವರು ನಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಹೀಗೆಯೇ ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗುತ್ತಿಗೆದಾರ ಹಾಗೂ ಉದ್ಯಮಿ ನಾಗರಾಜ ಕಟ್ಟಿಮನಿ ಹೇಳಿದರು.  

ತಮ್ಮ ಗಾರ್ಮೆಂಟ್ಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾನಾಡಿದರು. ಈ ಹಿಂದೆ ಪಾಳಾ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಗಾರ್ಮೆಂಟ್ಸ್‌ ಪ್ರಾರಂಭಿಸಿದ್ದೆನು. ಸದ್ಯ ಪಟ್ಟಣದಲ್ಲಿ ಲಕ್ಷಾಂತರ ಹಣ ಹಾಕಿ ಗಾರ್ಮೆಂಟ್ಸ್‌ ಆರಂಭಿಸಿ ಮಹಿಳೆಯರಿಗೆ ಕೈತುಂಬ ಕೆಲಸ ನೀಡಿದ್ದೇನೆ. ಇದಕ್ಕೆ ಯಾವುದೆ ಯೋಜನೆಯ ಹಣ ತೆಗೆದುಕೊಂಡಿಲ್ಲ. ಹೆಬ್ಬಾರ ಅವರು ದುಡ್ಡು ನೀಡಿಲ್ಲ. ನನ್ನ ಸ್ವಂತ ಹಣ ಹಾಕಿ ಗಾರ್ಮೆಂಟ್ಸ್‌ ಮಾಡುತ್ತಿದ್ದೇನೆ. 

ನಾನು ಗುರುವಾರ ಬೇರೆಯೊಂದು ವಿಚಾರದಲ್ಲಿ ಸಚಿವರಿಗೆ ಮಾತನಾಡಬೇಕು ಎಂದು ಸಚಿವರ ಆಪ್ತ ಸಹಾಯಕ ನಾಗರಾಜ ನಾಯ್ಕ ಅವರಿಗೆ ಪೋನ್ ಕರೆ ಮಾಡಿದಾಗ ನಾನು ಹೆಬ್ಬಾರ್ ಎಂದು ಹೇಳಿದ್ದಕ್ಕೆ ಆತನು ಸಿಟ್ಟಿಗೆದ್ದು ನೀನು ನಮ್ಮ ಸಚಿವರಿಗೆ ಹೆಬ್ಬಾರ್ ಸರ್ ಎನ್ನಬೇಕು ಹೆಬ್ಬಾರ ಸರ್ ಮಾಡಿರುವುದಕ್ಕೆ ನೀನು ಬೆಳೆದಿದ್ದೀಯಾ. ಬೆರಳಲ್ಲಿ ಉಂಗುರ ಹಾಕಿಕೊಂಡಿರುವುದು, ಕಾರು ಮೇಲೆ ಓಡಾಡುತ್ತಿರುವುದು ಹಾಗೂ ಗಾರ್ಮೆಂಟ್ಸ್‌ ಸುಧಾರಣೆ ಮಾಡಿಕೊಂಡಿದ್ದೀಯಾ ಎಂದು ಮಾತನಾಡಿದನು. ಅದಕ್ಕೆ ನಾನು ಕಷ್ಟಪಟ್ಟು ದುಡಿದು ಮೇಲೆ ಬಂದಿದ್ದೇನೆ. ನಾನು ಗುತ್ತಿಗೆದಾರನಾಗಿದ್ದು ಎಸ್‌.ಟಿ. ಸಮುದಾಯದಲ್ಲಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿರುವುದಕ್ಕೆ ಸಿದ್ದರಾಮಯ್ಯನವರು ಕಾರಣ. ಅವರ ಪೋಟೋ ಇಟ್ಟು ಪೂಜೆ ಮಾಡಬೇಕು. ಟೆಂಡರ್ ಹಾಕಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ. ಜನರಿದ್ದರೆ ಶಾಸಕರು ಶಾಸಕರಿದ್ದರೆ ಸಹಾಯಕರು. ಜನರೊಂದಿಗೆ ಅವಾಚ್ಯವಾಗಿ ಮಾತನಾಡಬಾರದು. ಜನರೊಂದಿಗೆ ಒಳ್ಳೆಯ ರೀತಿಯಲ್ಲಿ ಇರಬೇಕು ಇಲ್ಲದಿದ್ದರೆ ನಾವು ಸಹಿಸಿಕೊಳ್ಳುವುದಿಲ್ಲಾ ಎಂದರು.  

ನಾನು ಶಿವರಾಮ ಹೆಬ್ಬಾರ್ ಅವರ ಅಭಿಮಾನಿ. ಅವರು ನಮಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರು ಯಾವಾಗಲೂ ಕೆಟ್ಟದಾಗಿ ಮಾತನಾಡಿಲ್ಲ. ಆದರೆ ಅವರ ಹಿಂಬಾಲಕರಿಂದ ನಮಗೆ ಕಿರುಕುಳ ಆಗುತ್ತಿದೆ. ನಾವು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದೇವೆ ಎಂಬ ಕಾರಣಕ್ಕಾಗಿ ಅವರು ನಮ್ಮಿಂದ ಏನಾದರೂ ನೀರೀಕ್ಷಿಸುತ್ತಾರೆ. ಅದನ್ನು ಹೇಳಲು ಆಗುವುದಿಲ್ಲ ಹೇಳಿದರೆ ದೊಡ್ಡದಾಗುತ್ತದೆ. ಹೆಬ್ಬಾರ್ ಅವರು ರಾತ್ರಿ ವೇಳೆಯಲ್ಲಿ ಪೋನ್ ಕರೆ ಮಾಡಿದರೆ ಕಷ್ಟದಲ್ಲಿ ಸಹಕರಿಸುತ್ತಾರೆ. ಅವರ ಸಹಾಯಕರು ನಮಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದರು. 

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ