ಗಣೇಶ ಚತುರ್ಥಿ: ಅಯೋಧ್ಯೆ ರಾಮ ಮಂದಿರ ಮಾದರಿ ನಿರ್ಮಾಣ
ಮುಂಡಗೋಡ 10: ಮುಂಡಗೋಡ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಮಹಾಗಣಪತಿ ದೇವಸ್ಥಾನ ಪಕ್ಕದ ಸಭಾಭವನದಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ರೂಪಕ ನಿರ್ಮಾಣಗೊಂಡಿದ್ದು ಜನಾಕರ್ಷಣೆಗೊಂಡಿದೆ. ಶ್ರೀರಾಮ ಭಕ್ತರಾದ ತುಮಕೂರು ಜೆಲ್ಲೆ ಗುಬ್ಬಿ ತಾಲೂಕಾ ಬಿದರೆ ಗ್ರಾಮದ ಕಲಾವಿದ ವಿನಯರಾಮ್ ಇವರು ಅಯೋಧ್ಯೆಯ ರಾಮ ಮಂದಿರದ ಮಾದರಿಯನ್ನು 108 ಕಡೆ ಇಡುವ ಭೀಷ್ಮ ಪ್ರತಿಜ್ಞೆ ಮಾಡಿದ್ದು, ರಾಜ್ಯಾದ್ಯಂತ ಅಷ್ಠ ದಿಕ್ಕುಗಳಲ್ಲಿ ಸಂಚರಿಸುತ್ತಿರುವ ಶ್ರೀರಾಮ ಮಂದಿರವು ಗಣೇಶ ಚತುರ್ಥಿ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಪಟ್ಟಣದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ನಿರ್ಮಾಣಗೊಳಿಸಿದ್ದಾರೆ.