ಶಿಗ್ಗಾವ್

ಗಾಂಧೀಜಿ ಆದರ್ಶಗಳು ಎಂದಿಗೂ ಪ್ರಸ್ತುತ: ಮಡಿವಾಳರ

ಗಾಂಧೀಜಿ ಆದರ್ಶಗಳು ಎಂದಿಗೂ ಪ್ರಸ್ತುತ: ಮಡಿವಾಳರ

ಶಿಗ್ಗಾವಿ 02:  ‘ನನ್ನ ಜೀವನವೇ ನನ್ನ ಸಂದೇಶ’ಹೀಗೆಂದದವರು ದಿ.ಮಹಾತ್ಮಾ ಗಾಂಧೀಜಿ. ಅವರ ಆದರ್ಶಗಳು ಎಂದಿಗೂ ಪ್ರಸ್ತುತ ಎಂದು ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಮಡಿವಾಳರ ಹೇಳಿದರು. 

ತಾಲೂಕಿನ ಗೊಟಗೋಡಿಯ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್‌ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆ ಸಮಾರಂಭದಲ್ಲಿ ಭಾನುವಾರ ಮಾತನಾಡಿ ನಮ್ಮ ರಾಷ್ಟ್ರೀಯ ನಾಯಕರ ಜಯಂತಿ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳನ್ನು ವಿಶೇಷವಾಗಿ ಶಿಕ್ಷಕರು ಅನುಸರಿಸಿ, ವಿದ್ಯಾರ್ಥಿಗಳಿಗೆ ಧಾರೆ ಎರೆದರೆ ಸುಭೀಕ್ಷ ಸಮಾಜದ ಜತೆಗೆ ದೇಶವನ್ನು ಮತ್ತಷ್ಟು ಸಧೃಡಗೊಳಿಸಬಹುದು ಎಂದು ಮಡಿವಾಳರ ನುಡಿದರು. 

ಮಾಜಿ ಪ್ರಧಾನಿ ಲಾಲ್ ಬಹಾದೂರ ಶಾಸ್ತ್ರಿಯವರ ವಿದ್ಯಾರ್ಥಿ ಜೀವನದ ಕುರಿತು ಮುಖ್ಯ ಶಿಕ್ಷಕಿ ಅನುಪಮಾ ಹೆಬ್ಬಾರ್ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ ಎಂದರು. 

ಉತ್ಸವ ರಾಕ್ ಗಾರ್ಡನ್ ನಿರ್ದೇಶಕ ಆನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಉಮಾ ಪಾಟೀಲ, ನಿಂಗರಾಜ ಎಫ್‌.ಮಾಗೋಡ, ಗಾಯತ್ರಿ ವಡ್ಡರ, ಮಂಜುಳಾ ಸೂರಗೊಂಡ, ಅಶ್ವಿನಿ ಪೊಲೀಸಗೌಡರ ಮತ್ತಿತರರು ಭಾಗವಹಿಸಿದ್ದರು. ಸಹ ಶಿಕ್ಷಕ ಮಹೇಶ ವಡ್ಡರ ಸ್ವಾಗತಿಸಿದರು. ಶಿಕ್ಷಕ ನಝೀರ್‌ಅಹ್ಮದ್ ಮಕಾಂದರ ವಂದಿಸಿದರು. 


ಸುದ್ದಿ ಓದಿ